Kannada NewsKarnataka NewsLatest

*ಮೋಮೋಸ್ ಮಾರಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಮೋಮೋಸ್ ಮಾರಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಮಡಿವಾಳದಲ್ಲಿ ಈ ಘಟನೆ ನಡೆದಿದೆ. ಸರ್ಜಾಪುರ ರಸ್ತೆಯಲ್ಲಿರಿವ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಈ ಬಗ್ಗೆ ಸಂತ್ರಸ್ತ ಯುವತಿಯೇ ದೂರು ನೀಡಿದ್ದಾಳೆ.

Home add -Advt

ಹೈನಾಸ್ ಅತ್ಯಾಚಾಹರವೆಸಗಿರುವ ಕಾಮುಕ. ವಿದ್ಯಾರ್ಥಿನಿ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ವೇಳೆ ಮೋಮೋಸ್ ಮಾರಾಟ ಮಾಡುತ್ತಿದ್ದಳು. ಇತ್ತೀಚೆಗೆ ಮೋಮೋಸ್ ಅಂಗಡಿ ಮಾಲೀಕ ತನ್ನ ಅಂಗಡಿ ಮಾರಾಟಕ್ಕೆ ಮುಂದಾಗಿದ್ದ. ಘೋಷ ಹಾಗೂ ಅತುಲ್ ಎಂಬ ಅಂಗಡಿ ಮಾಲೀಕರು ಮೋಮೋಸ್ ಅಂಗಡಿ ಮಾರಾಟಕ್ಕೆ ಮುಂದಾಗಿದ್ದರು, ಹೈನಾಸ್ ಎಂಬಾತ ಮಧ್ಯವರ್ತಿಯಾಗಿ ಬಂದಿದ್ದ.

ಈ ವೇಳೆ ಘೋಷ, ಅತುಲ್ ಹಾಗೂ ಹೈನಾಸ್ ಮತ್ತು ಯುವತಿ ನಾಲ್ವರು ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಘೋಷ್ ಹಾಗೂ ಅತುಲ್ ಊಟ ತರಲೆಂದು ಹೊರಗೆ ಹೋಗಿದ್ದಾರೆ. ಈ ವೇಳೆ ಹೈನಾಸ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಯುವತಿ ದೂರು ನೀಡಿದ್ದಾಳೆ.

ಸಂತ್ರಸ್ತೆ ಮೊದಲು ಮಡಿವಾಳ ಠಾಣೆಯಲ್ಲಿ ದೂರು ನೀಡಲು ಹೋದಾಗ ಅಲ್ಲಿನ ಪೊಲೀಸರು ಯುವತಿಯನ್ನೇ ಹೀಯಾಳಿಸಿ ಕಳುಹಿಸಿದ್ದರಂತೆ ಇದರಿಂದ ನೊಂದರೂ ದೃತಿಗೆಡದ ಯುವತಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Related Articles

Back to top button