ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಮಗು ಸಜೀವ ದಹನಗೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಬೆಸ್ಕಾಂ ನಿರ್ಲಕ್ಷ್ಯದಿಂದಾಗಿ ಲೈನ್ ಮ್ಯಾನ್ ಓರ್ವರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಪೂರ್ವ ಆಲೂಕಿನ ಚೀಮಸಂದ್ರ ಬಳಿ ನಡೆದಿದೆ.
ವಿದ್ಯುತ್ ಕಂಬ ಹತ್ತಿ ಪ್ಯೂಸ್ ಬದಲಾವಣೆ ಮಾಡುವ ವೇಳೆ ಕರೆಂಟ್ ಪ್ರವಹಿಸಿ ಲೈನ್ ಮ್ಯಾನ್ ಮೃತಪಟ್ಟಿದ್ದಾರೆ. ಸಿದ್ದರಾಜು (33) ಮೃತರು. ವಿದ್ಯುತ್ ಲೈನ್ ದುರಸ್ತಿಗೆಂದು ಲೈನ್ ಮ್ಯಾನ್ ಸಿದ್ದರಾಜು ಹೋಗಿದ್ದರು.
ಬೆಸ್ಕಾಂ ಸಿಬ್ಬಂದಿಗಳಿಗೆ ಕರೆ ಮಾಡಿ ಲೈನ್ ಸರಿಪಡಿಸಬೇಕು ಹಾಗಾಗಿ ವಿದ್ಯುತ್ ಕಡಿತಗೊಳಿಸುವಂತೆ ಹೇಳಿದ್ದರು. ಬೆಸ್ಕಾಂ ಕಚೇರಿ ಸಿಬ್ಬಂದಿ ವಿದ್ಯುತ್ ಕಡಿತಗೊಳಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ. ಕರೆಂಟ್ ತೆಗೆದಿರಬಹುದೆಂದು ವಿದ್ಯುತ್ ಕಂಬ ಹತ್ತಿ ಪ್ಯೂಸ್ ಬದಲಿಸುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಸ್ಥಳದಲ್ಲೇ ಲೈನ್ ಮ್ಯಾನ್ ಸಾವನ್ನಪ್ಪಿದ್ದಾರೆ.
ಬೆಸ್ಕಾಂ ಸಿಬ್ಬಂದಿ ದುರಸ್ತಿ ಮಾಡುವ ಲೈನ್ ಬದಲಾಗಿ ಬೇರೆ ಲೈನ್ ವಿದ್ಯುತ್ ಕಡಿತ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕಂಬ ಹತ್ತಿದ್ದ ಲೈನ್ ಮ್ಯಾನ್ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ.
ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ