ಪ್ರಗತಿವಾಹಿನಿ ಸುದ್ದಿ, ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರಾಮಹೋತ್ಸವ ಇದೇ ಜುಲೈ ೨೪ ರಿಂದ ಜುಲೈ ೨೮ರವರೆಗೆ ಜರುಗಲಿರುವ ಪ್ರಯುಕ್ತ ಗ್ರಾಮದೇವತೆ ಜಾತ್ರಾಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಲ್ಲಿಯ ದ್ಯಾಮವ್ವದೇವಿ ದೇವಸ್ಥಾನದ ಸಭಾಂಗಣದಲ್ಲಿ ಜು.೧೧ರಂದು ನಡೆಯಿತು.
ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಶ್ರೀದೇವಿಯ ಜಾತ್ರಾಮಹೋತ್ಸವ ನಡೆಯಲಿದ್ದು, ಸ್ಥಳೀಯರು ತನು, ಮನ, ಧನ ಸಹಾಯ, ಸಹಕಾರ ನೀಡಿ, ಈ ಸಲ ಶ್ರೀದೇವಿಯ ಜಾತ್ರಾಮಹೋತ್ಸವ ವಿಜೃಂಭನೆಯಿಂದ ಆಚರಿಸಿ, ಯಶಸ್ವಿಗೊಳಿಸುವಂತೆ ಸ್ಥಳೀಯ ಸರ್ವ ಸಮುದಾಯದ ಹಿರಿಯ ನಾಗರಿಕರು, ಮುಖಂಡರು, ಯುವಕರಲ್ಲಿ ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಮನವಿ ಮಾಡಿಕೊಂಡರು.
ಈ ವೇಳೆ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಯುವಕರು, ಸ್ಥಳೀಯರು, ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಶ್ರೀದೇವಿ ದೇವಸ್ಥಾನದ ಅರ್ಚಕರು, ಭಕ್ತರು, ಮತ್ತೀತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ