Belagavi NewsBelgaum NewsKannada NewsKarnataka NewsNational

*ಸವದತ್ತಿ ಯಲ್ಲಮ್ಮನ ದೇವಸ್ಥಾನದ ಬಳಿ ದನಕರು ಬಿಟ್ರೆ ಹುಷಾರ್: ಮಾಲೀಕರಿಗೆ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ವರ್ಷವಿಡಿ ಸುಮಾರು 10 ಲಕ್ಷಕ್ಕಿಂತ ಅಧಿಕ ಭಕ್ತರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಂದ ಸಾಕಷ್ಟು ದೂರುಗಳು ಸ್ವೀಕೃತವಾಗುತ್ತಿದ್ದು, ದೇವಸ್ಥಾನದ ಆವರಣದಲ್ಲಿ ಹಾಗೂ ಯಲ್ಲಮ್ಮನ ಗುಡ್ಡದ ಇತರೆ ಎಲ್ಲ ಸ್ಥಳಗಳಲ್ಲಿ ಧನಕರುಗಳು ಬೇಕಾಬಿಟ್ಟಿಯಾಗಿ ಅಡ್ಡಾಡುತ್ತಿದ್ದು ಇದರಿಂದ ಭಕ್ತರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಕೆಲವು ಜಾನುವಾರುಗಳು ಸಾರ್ವಜನಿಕರಿಗೆ ದೈಹಿಕವಾಗಿ ದಾಳಿ ಮಾಡುತ್ತಿವೆ. ಭಕ್ತರು ಗಾಬರಿಯಿಂದ ಓಡಾಡುತ್ತಿದ್ದು ಭಯದ ವಾತಾವರಣ ಸೃಷ್ಟಿಯಾಗಿ ಸಾರ್ವಜನಿಕರಿಗೆ ಉಪದ್ರವಾಗುತ್ತಿದೆ.

ಇದಲ್ಲದೆ ಸಾಕಷ್ಟು ಕಲ್ಮಶಗೊಳಿಸುತ್ತಿದ್ದು, ಸಂಬಂಬದಪಟ್ಟ ಮಾಲೀಕರಿಗೆ 1 ವಾರಗಳ ಕಾಲ ಗಡುವು ನೀಡಿದ್ದು, 1 ವಾರದಲ್ಲಿ ತಮ್ಮ ತಮ್ಮ ಜಾನುವಾರುಗಳನ್ನು ತೆಗೆದುಕೊಂಡು ಹೋಗತಕ್ಕದ್ದು. ಇಲ್ಲವಾದಲ್ಲಿ ಸದರಿ ಎಲ್ಲ ಜಾನುವಾರಗಳನ್ನು ಬೀದಿ ಜಾನುವಾರುಗಳು ಅಂತಾ ಪರಿಗಣಿಸಿ ಮತ್ತು ಸಾರ್ವಜನಿಕ ಉಪದ್ರವ/ಉಪಟಳ ಅಂತಾ ಪರಿಗಣಿಸಿ ಸರ್ಕಾರಕ್ಕೆ ಕಬ್ಬಾ ತೆಗೆದುಕೊಂಡು ಮಾಲಿಕರ ಮೇಲೆ ಬಿಎನ್‌ಎಸ್ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಯಲ್ಲಮ್ಮನಗುಡ್ಡದ ಕಾರ್ಯದರ್ಶೀಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Articles

Back to top button