Latest

*BF.7 ಆತಂಕ; ಕ್ವಾರಂಟೈನ್ ಕಡ್ಡಾಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೊಸ ವರ್ಷಾಚರಣೆ ಬೆನ್ನಲ್ಲೇ ರಾಜ್ಯದಲ್ಲಿ ಕೊರೊನಾ ಒಮಿಕ್ರಾನ್ ರೂಪಾಂತರಿ ವೈರಸ್ BF.7 ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

BF.7 ಭೀತಿ ಹಿನ್ನೆಲೆಯಲ್ಲಿ ಹೈರಿಸ್ಕ್ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ 7 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ಹಾಂಗ್ ಕಾಂಗ್, ಸಿಂಗಾಪುರ, ಚೀನಾ, ಜಪಾನ್, ಥೈಲ್ಯಾಂಡ್, ದಕ್ಷಿಣ ಕೊರಿಯಾ ಸೇರಿದಂತೆ ಹೈರಿಸ್ಕ್ ದೇಶಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ತಿಳಿಸಿದೆ.

ಹೋಟೆಲ್ ನಲ್ಲಿ ಕ್ವಾರಂಟೈನ್ ಗೆ ಒಳಪಡುವವರು ತಾವೇ ವೆಚ್ಚ ಭರಿಸಬೇಕು. ಮನೆಯಲ್ಲಿ ಕ್ವಾರಂಟೈನ್ ಆಗುವವರ ಮೇಲೆ ಬಿಬಿಎಂಪಿ ನಿಗಾ ವಹಿಸಲಿದೆ. ಏರ್ ಪೋರ್ಟ್ ನಲ್ಲಿ ತಪಾಸಣೆ ವೇಳೆ ಕೋವಿಡ್ ದೃಢಪಟ್ಟರೆ ಹೋಟೆಲ್ ಕ್ವಾರಂಟೈನ್ ಕಡ್ಡಾಯವಾಗಿದೆ.

Home add -Advt

ಇನ್ನು ಕೋವಿಡ್ ದೃಢಪಟ್ಟ ಸೋಂಕಿತರಿಗೆ ಜಿನೋಮಿಕ್ ಸಿಕ್ವೆನ್ಸ್ ಕಡ್ಡಾಯಗೊಳಿಸಲು ಬಿಬಿಎಂಪಿ ತೀರ್ಮಾನಿಸಿದೆ.

*ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಗಂಭೀರ*

https://pragati.taskdun.com/siddeshwara-swamijihealth-criticlevijayapura/v

Related Articles

Back to top button