Belagavi NewsBelgaum NewsKannada NewsKarnataka NewsLatest
*ನ.22ರಂದು ಭಗವದ್ಗೀತೆ ವಿವಿಧ ಸ್ಫರ್ಧೆ, ಸಮಾರೋಪ*

ಪ್ರಗತಿವಾಹಿನಿ ಸುದ್ದಿ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ನಡೆಯುತ್ತಿರುವ 2025- 26ನೇ ಸಾಲಿನ ಭಗವದ್ಗೀತೆ ಅಭಿಯಾನದ ಅಂಗವಾಗಿ ಬೆಳಗಾವಿ ಜಿಲ್ಲಾ ಮಟ್ಟದ ವಿವಿಧ ಸ್ಫರ್ಧೆಗಳು ನವೆಂಬರ್ 22ರಂದು ಆನಗೋಳದ ಸಂತ ಮೀರಾ ಶಾಲೆಯಲ್ಲಿ ನಡೆಲಿವೆ.
ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ, ರಸಪ್ರಶ್ನೆ ಮತ್ತು ಶ್ಲೋಕ ಪಠಣ ಸ್ಫರ್ಧೆಗಳು ಬೆಳಗ್ಗೆ 10.30ರಿಂದ ನಡೆಯಲಿವೆ. ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಬಹುದು.
ಇದಾದ ನಂತರ ಭಗವದ್ಗೀತೆ ಜಿಲ್ಲಾ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 8296660587, 8618664881, 9845689241, 9448850016



