Karnataka News

ಬೆಳಗಾವಿಯಲ್ಲಿ ಬುಧವಾರ ಭಗವದ್ಗೀತಾ ಕಂಠಪಾಟ ಸ್ಪರ್ಧೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ ;
ಬೆಳಗಾವಿಯ ಗುರುದೇವ ರಾನಡೆ ಮಂದಿರದಲ್ಲಿ ಬುಧವಾರ (ನ.30) ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಭಗವದ್ಗೀತೆ ಕಂಠ ಪಾಟ ಸ್ಪರ್ಧೆ ಆಯೋಜಿಸಲಾಗಿದೆ.

ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು. ಭಗವದ್ಗೀತೆಯ 5ನೇ ಅಧ್ಯಾಯದ ಮೊದಲ 10 ಶ್ಲೋಕಗಳನ್ನು ಮಾತ್ರ ಸ್ಪರ್ಧೆಯಲ್ಲಿ ಪ್ರಸ್ತುತಪಡಿಸಬಹುದಾಗಿದೆ.

ಸೋಂದಾ ಸ್ವರ್ಣವಲ್ಲೀ ಮಠದ ಕರ್ನಾಟಕ ಅಭಿಯಾನದ ಶೈಲಿಯಲ್ಲೇ ಶ್ಲೋಕಗಳನ್ನು ಪ್ರಸ್ತುತಪಡಿಸಬೇಕು.
ಮೂರು ಸಮಾಧಾನಕರ ಬಹುಮಾನಗಳೂ ಸೇರಿದಂತೆ ಒಟ್ಟು ಆರು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ಬೆಳಗಾವಿಯ ಭಗವದ್ಗೀತಾ ಅಭಿಯಾನದ ಪ್ರಕಟಣೆ ತಿಳಿಸಿದೆ.

 

Home add -Advt

ಶಾಲಾ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ

https://pragati.taskdun.com/bhagavadgeetaschool-collegesthis-yearsb-c-naagesh/

ಪಠ್ಯಕ್ರಮದಲ್ಲಿ ಭಗವದ್ಗೀತೆ ನಮ್ಮ ಧ್ಯೇಯ; ಸಿಎಂ ಬೊಮ್ಮಾಯಿ ಸ್ಪಷ್ಟನೆ

https://pragati.taskdun.com/basavaraj-bommaitext-bookbhagavadgeeteclarification/

Related Articles

Back to top button