ಪ್ರಗತಿವಾಹಿನಿ ಸುದ್ದಿ; ಮಂಗಳೂರು; ರಾಜ್ಯದಲ್ಲಿ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಲೆಯಲ್ಲಿ ಭಗವದ್ಗೀತೆ ಹೇಳಿಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ನಮ್ಮ ಆಗ್ರಹ ಎಂದು ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶಾಲೆಯಲ್ಲಿ ಭಗವದ್ಗೀತೆಯನ್ನಾದರೂ ಹೇಳಿಕೊಡಲಿ, ಕುರಾನ್ ಆದ್ರೂ ಹೇಳಿಕೊಡಲಿ, ಬೈಬಲ್ ಆದರೂ ಹೇಳಿಕೊಡಲಿ. ಯಾವುದಕ್ಕೂ ನಮ್ಮ ವಿರೋಧವಿಲ್ಲ. ಆದರೆ ನಮ್ಮದು ಬಹುಸಂಸ್ಕೃತಿ ರಾಷ್ಟ್ರ. ಸಮಬಾಳ್ವೆ, ಸಹಿಷ್ಣುತೆ ಎನ್ನುವುದು ಸಂವಿಧಾನಿಕವಾಗಿ ಮಹತ್ವವಾದದ್ದು. ಈ ನಿಟ್ಟಿನಲ್ಲಿ ಮುನ್ನಡೆಯಬೇಕು.
ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಬೇಕು. ಹಾಗಂತ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುವುದು ಸರಿಯಲ್ಲ. ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಕೊಡುವ ಬಗ್ಗೆ ಚಿಂತನೆ ನಡೆಸಲಿ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ನವರದ್ದು ಸಾಫ್ಟ್, ಹಾರ್ಡ್ ಹಿಂದುತ್ವ ಎಂಬುದು ಇಲ್ಲ, ನಾವು ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತೇವೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕನ್ನಡಕ್ಕೆ ಡಬ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾವ ಚಿತ್ರವನ್ನಾದರೂ ತೋರಿಸಲಿ. ಆದರೆ ಸತ್ಯವನ್ನು ತೋರಿಸಲಿ. ಕಾಶ್ಮೀರದಲ್ಲಿ ಉಗ್ರರ ಕೃತ್ಯ, ಪಂಡಿತರ ಸಮಸ್ಯೆ, ಬೇರೆಯಾರಿಗೆ ಸಮಸ್ಯೆಯಾಗಿತ್ತು ? ಆಗ ಅಲ್ಲಿ ಯಾವ ಸರ್ಕಾರ ಇತ್ತು? ಸರ್ಕಾರ ಏನು ಮಾಡಿತು? ಗುಜರಾತ್ ಘಟನೆ, ಲಖೀಂಪುರ ಘಟನೆಯನ್ನೂ ತೋರಿಸಲಿ. ನಾನು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡೋದು ಕಡಿಮೆ. ನಾನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲ್ಲ ಎಂದರು.
ಆಭರಣ ಖರೀದಿಸಬೇಕೆ?; ಹಾಗಾದರೆ ಇಂದಿನ ಚಿನ್ನ-ಬೆಳ್ಳಿ ದರದ ಬಗ್ಗೆ ಇರಲಿ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ