*ಆಕ್ಷೇಪಾರ್ಹ ಪದ ಬಳಕೆ: ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಕನ್ನಡ ಸೀಜನ್-12 ನಡೆಯುತ್ತಿದ್ದು, ಕೆಲ ಸ್ಪರ್ಧಿಗಳ ನಾಲಿಗೆಗೆ ಲಂಗು-ಲಗಾಮು ಇಲ್ಲದಂತಾಗಿದೆ. ಬಾಯಿಗೆ ಬಂದಂತೆ ಪರಸ್ಪರ ಗಲಾಟೆ ಮಾಡಿಕೊಳ್ಳುವುದು ಒಬ್ಬರ ಮೇಲೆ ದಬ್ಬಾಳಿ ಮಾಡಿ ಆಡಿಕೊಂಡು ನಗುವುದನ್ನೇ ಸ್ಪರ್ಧೆಯನ್ನಾಗಿ ತೆಗೆದುಕೊಂಡಂತಿದೆ. ಈಮೂಲಕ ತಮ್ಮ ನಿಜ ಮುಖಗಳನ್ನು ಕನ್ನಡದ ಅತಿ ದೊಡ್ದ ರಿಯಾಲಿಟಿ ಶೋನಲ್ಲಿ ಬಯಲು ಮಾಡಿಕೊಳ್ಳುತ್ತಿದಾರೆ.
ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಕರವೇ ಹೋರಾಟಗಾರ್ತಿ, ನಟಿ, ಬಿಗ್ ಬಾಸ್ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಸೇರಿದಂತೆ ನಾಲ್ವರ ವಿರುದ್ಧ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಯನ್ನು ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ‘ಷಿ ಈಸ್ S ಕ್ಯಾಟಗರಿ’ ಎಂದು ಹೇಳುವ ಮೂಲಕ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಅಶ್ವಿನಿ ಗೌಡರ ಈ ಹೇಳಿಕೆ ಬಗ್ಗೆ ನಟ ಕಿಚ್ಚಾ ಸುದೀಪ್ ಕೂಡ ವಾರಾಂತ್ಯದ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಅಶ್ವಿನಿ ಗೌಡ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೆ ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಬಿಡದಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಶ್ವಿನಿ ಗೌಡ, ಸುಷ್ಮಾ, ಪ್ರಕಾಶ್, ಕಲರ್ ಕನ್ನಡ ಹೆಡ್ ಪ್ರಶಾಂತ್ ನಾಯ್ಕ್ ವಿರುದ್ಧ ಎನ್ ಸಿಆರ್ ದಾಖಲಾಗಿದೆ.