*ಬಿಹಾರ ಚುನಾವಣೆ: ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ ಎನ್ ಡಿ ಎ ಮೈತ್ರಿಕೂಟ*

ಪ್ರಗತಿವಾಹಿನಿ ಸುದ್ದಿ: ಬಿಹಾರ ವಿಧಾನಸಭಾ ಚುನಾವಣೆ 2025ರ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಅಂಚೆ ಮತಗಳ ಸುತ್ತಿನಲ್ಲಿ ಎನ್ ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.
ಎನ್ ಡಿಎ 154 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಎಂಜಿಬಿ 83 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಫಲಿತಾಂಶಕ್ಕೂ ಮೊದಲೇ ಎನ್‌ಡಿಎ ಶಿಬಿರದಲ್ಲಿ ಈಗಾಗಲೇ ಸಂಭ್ರಮಾಚರಣೆಗಳು ಪ್ರಾರಂಭವಾಗಿದೆ. ಇದಕ್ಕಾಗಿ 500 ಕೆಜಿ ಲಾಡು ಬರೋಬ್ಬರಿ 5 ಲಕ್ಷ ರಸಗುಲ್ಲಾವನ್ನು ತಯಾರು ಮಾಡಲಾಗಿದೆ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಬೃಹತ್ ಔತಣಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಸಿಂಗ್ ಕಲ್ಲು ಅವರು ಬರೋಬ್ಬರಿ 500 ಕಿಲೋಗ್ರಾಂಗಳಷ್ಟು ಲಾಡುಗಳನ್ನು ಆರ್ಡರ್ ಮಾಡಿದ್ದಾರೆ.
ಮತ್ತೊಂದೆಡೆ ಫಲಿತಾಂಶಕ್ಕೂ ಮುನ್ನವೇ ಸಂಭ್ರಮಾಚರಣೆಗೆ ಮತ್ತಷ್ಟು ಮೆರುಗು ನೀಡಲು ಅನಂತ್ ಸಿಂಗ್ ಅವರ ಕುಟುಂಬ ಸದಸ್ಯರು ಪಾಟ್ನಾದಲ್ಲಿ 50,000 ಜನರಿಗೆ ಔತಣಕೂಟವನ್ನು ಆಯೋಜಿಸಿದ್ದಾರೆ. ಅವರ ಪತ್ನಿ ನೀಲಂ ದೇವಿ ಅವರ ನಿವಾಸದಲ್ಲಿ ಇದರ ಸಿದ್ಧತೆಗಳು ನಡೆಯುತ್ತಿದ್ದು ಬೃಹತ್ ಔತಣಕೂಟಕ್ಕೆ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿದೆ. ಈ ಔತಣಕೂಟಕ್ಕಾಗಿ ಐದು ಲಕ್ಷ ರಸಗುಲ್ಲಾ ಮತ್ತು ಗುಲಾಬ್ ಜಾಮೂನುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.



