
ಪ್ರಗತಿವಾಹಿನಿ ಸುದ್ದಿ: ಇಂದು ಬೆಳ್ಳಂ ಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ 40 ಜನ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಬಳಿಕ, ಬಸ್ ಸಂಪೂರ್ಣ ಸುಟ್ಟುಹೋದ ಘಟನೆ ನಡೆದಿದ್ದು, ಈ ದುರಂತದಲ್ಲಿ 15 ಜನರ ಸಜೀವ ಧಹನವಾಗಿರುವ ಘಟನೆ ನಡೆದಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾವೇರಿ ಟ್ರಾಲ್ಸ್ ನ ವೋಲ್ವೋ ಬಸ್‌ಗೆ ಬೈಕ್ ಡಿಕ್ಕಿಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣದ ವೇಳೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಸ್‌ನ ಕೆಳಗೆ ಸಿಲುಕಿಕೊಂಡಿತು. ಈ ವೇಳೆ ಘರ್ಷಣೆಯಿಂದಾಗಿ ಕಿಡಿ ಹುಟ್ಟಿಕೊಂಡು ಬೆಂಕಿ ಆವರಿಸಿದೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕರ್ನೂಲ್‌ನ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್, ಅದು ಎಸಿ ಬಸ್ ಆಗಿದ್ದರಿಂದ ಹೆಚ್ಚಿನ ಸಾವುನೋವುಗಳಾಗಿವೆ. ಕೆಲ ಪ್ರಯಾಣಿಕರು ಬಸ್‌ನ ಕಿಟಕಿ ಗಾಜನ್ನು ಒಡೆದು ಹೊರಬಂದಿದ್ದಾರೆ. ಪ್ರಯಾಣಿಕರ ಪಟ್ಟಿಯ ಪ್ರಕಾರ, ಇಬ್ಬರು ಚಾಲಕರು ಸೇರಿದಂತೆ 40 ಜನರು ಆ ಬಸ್‌ನಲ್ಲಿದ್ದರು. ಸದ್ಯ 15 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯನ್ನು ಈಗ ನಿಯಂತ್ರಿಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.




