
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕುಖ್ಯಾತ ಬೈಕ್ ಕಳ್ಳನನ್ನು ಬಂಧಿಸಿರುವ ಬೆಂಗಳೂರು ತಿಲಕನಗರ ಪೊಲೀಸರು 13 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅರ್ಬಾನ್ ಅಲಿಯಾಸ್ ಶಕ್ತಿಮಾನ್ ಬಂಧಿತ ಆರೋಪಿ. ಬೈಕ್ ಕಳುವು ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದ ಆರೋಪಿ ಬಿಡುಗಡೆಯಾದ ಬಳಿಕ ಜೈಲು ಆವರಣದಲ್ಲೇ ಇದ್ದ ಬೈಕ್ ಕದ್ದು, ಕದ್ದ ಬೈಕ್ ನಲ್ಲೇ ಮನೆಗೆ ಬಂದಿದ್ದ. ಬೈಕ್ ವ್ಹೀಲಿಂಗ್ ಹುಚ್ಚಿಗೆ ಬಿದ್ದು ಕಳ್ಳತನ ಮಾಡುತ್ತಿದ್ದ. ಹೀಗೆ ವ್ಹೀಲಿಂಗ್ ಮಾಡುವಾಗ ಪೆಟ್ರೋಲ್ ಖಾಲಿಯಾದರೆ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸಿ ಪರಾರಿಯಾಗುತ್ತಿದ್ದ.
ಕಳೆದ 3 ತಿಂಗಳಲ್ಲಿ 65ಕ್ಕೂ ಹೆಚ್ಚು ಬೈಕ್ ಕಳ್ಳತನಮಾಡಿದ್ದ ಅರ್ಬಾನ್ ನನ್ನು ಸುದ್ದಗುಂಟೆ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಮತ್ತದೇ ಕೆಲಸ ಆರಂಭಿಸಿದ್ದ. ಇದೀಗ ಮತ್ತೆ 20 ಬೈಕ್ ಕಳುವು ಪ್ರಕರಣದಲ್ಲಿ ಅರ್ಬಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅರ್ಬಾನ್ ಗೆ ಸಾಥ್ ನೀಡುತ್ತಿದ್ದ ಮೊಹಮ್ಮದ್ ಅನೀಸ್ ನನ್ನೂ ಬಂಧಿಸಲಾಗಿದೆ. ಬಂಧಿತರಿಂದ 13 ಬೈಕ್ ವಶಕ್ಕೆ ಪಡೆಯಲಾಗಿದೆ.
ತಿಲಕ್ ನಗರ, ಸುದ್ದಗುಂಟೆಪಾಳ್ಯ, ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಇಬ್ಬರನ್ನು ಮತ್ತೆ ಜೈಲಿಗಟ್ಟಲಾಗಿದೆ.