ಪ್ರಗತಿವಾಹಿನಿ ಸುದ್ದಿ: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ-SIT ಅಧಿಕಾರಿಗಳು ಮತ್ತೊಮ್ಮೆ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಮಗನ ವಿಚಾರಣೆ ನಡೆಸಿದ್ದಾರೆ.
ಡಿಜಿಪಿ ದರ್ಜೆಯ ಅಧಿಕಾರಿಯ ಮಗ ರಿಷಬ್ ಎಂಬಾತನ ವಿಚಾರಣೆಯನ್ನು ಎಸ್ ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ. 2016ರಿಂದ 2021ವರೆಗೆ ನಡೆದ ವ್ಯವಹಾರದ ಬಗ್ಗೆ ವಿಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಶ್ರೀಕಿ 5.5 ಕೋಟಿ ಮೌಲ್ಯದ 150 ಬಿಟ್ ಕಾಯಿನ್ ಗಳ ವ್ಯವಹಾರ ನಡೆಸಿದ್ದ. ಈ ವ್ಯವಹಾರವನ್ನು ಕೋಲ್ಕತ್ತಾದ ರಾಬಿನ್ ಖಂಡೇವಾಲ ಎಂಬಾತನ ಮೂಲಕ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ