Election NewsKannada NewsKarnataka NewsNationalPolitics

*ಭ್ರಷ್ಟರಿಗೆ ಮತ ನೀಡಬೇಡಿ: ಕೇಜ್ರಿವಾಲ್ ವಿರುದ್ಧ ಗುಡುಗಿದ ಅಣ್ಣಾ ಹಜಾರೆ*

ಪ್ರಗತಿವಾಹಿನಿ ಸುದ್ದಿ: ಭ್ರಷ್ಟಾಚಾರ ನಡೆಸಿದ ವ್ಯಕ್ತಿಗೆ ಯಾರೂ ಮತ ನೀಡಬೇಡಿ ಎಂದು ಬಹಿರಂಗವಾಗಿಯೇ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಗುಡುಗಿದ್ದಾರೆ. 

Home add -Advt

ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಜ್ರಿವಾಲ್ ಅವರು ಮದ್ಯದ ಪ್ರಭಾವದಿಂದ ಭ್ರಷ್ಟಾಚಾರ ಎಸಗಿದ್ದಾರೆ. ಅಂತಹ ವ್ಯಕ್ತಿಗಳನ್ನು ಮರು ಆಯ್ಕೆ ಮಾಡಬಾರದು. ಶುದ್ಧ ವ್ಯಕ್ತಿಗಳಿಗೆ ಮಾತ್ರ ನಿಮ್ಮ ಮತ ನೀಡಿ ಎಂದಿದ್ದಾರೆ.‌

ಮತದಾರರು ಸರಿಯಾದ ಅಭ್ಯರ್ಥಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ರಾಷ್ಟ್ರದ ಅಧಿಕಾರವು ಅನರ್ಹರ ಕೈಗೆ ಬೀಳಬಾರದು. ಪ್ರಾಮಾಣಿಕತೆಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಮತದಾರರ ಕೈಯಲ್ಲಿ ರಾಷ್ಟ್ರದ ಭವಿಷ್ಯದ ಕೀಲಿಕೈ ಇದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ಎದುರಿಸುತ್ತಿರುವ ರಾಜಕಾರಣಿಗಳಿಗೆ ನಿಮ್ಮ ಮತ ನೀಡಬೇಡಿ ಎಂದು ಅಣ್ಣಾ ಹಜಾರೆ ಆಗ್ರಹಿಸಿದರು.

Related Articles

Back to top button