ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತದಲ್ಲಿ ಬಿಟ್ ಕಾಯಿನ್ ಗೆ ಯಾವುದೇ ರೀತಿಯ ಕಾನೂನುಬದ್ಧ ಮಾನ್ಯತೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ. ದೇಶದಲ್ಲಿ ಬಿಟ್ ಕಾಯಿನ್ ಗೆ ಕಾನೂನು ಮಾನ್ಯತೆ ಇಲ್ಲ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬ್ಯಾಂಕ್ ನೋಟು ವ್ಯಾಖ್ಯಾನ ಬದಲಾಯಿಸಲು ಪ್ರಸ್ತಾಪ ಬಂದಿದೆ ಎಂದರು.
ನೋಟು ವ್ಯಾಖ್ಯಾನದಲ್ಲಿ ಡಿಜಿಟಲ್ ರೂಪದ ಕರೆನ್ಸಿ ಸೇರ್ಪಡೆ ಮಾಡಲು ಪ್ರಸ್ತಾಪ ಕಳಿಸಿದೆ. ಇನ್ನು ಕ್ರಿಪ್ಟೊಕರೆನ್ಸಿ ಟ್ರೇಡಿಂಗ್ ಮೇಲೆ ಭಾರತದಲ್ಲಿ ಸದ್ಯ ಯಾವುದೇ ನಿಯಂತ್ರಣ ಇಲ್ಲ ಎಂದು ಹೇಳಿದರು.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ