ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿ ಡಿ.5ರಂದು ನಡೆಯಲಿರುವ ಉಪಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯನ್ನು ಅಥಣಿ ಕ್ಷೇತ್ರದ ಉಸ್ತುವಾರಿ ನೇಮಕ ಮಾಡಲಾಗಿದ್ದು, ಅವರು ಸ್ಪರ್ಧಿಸುವ ಸಾಧ್ಯತೆ ಕ್ಷೀಣಿಸಿದೆ. ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವುದೇ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿಸದಿರುವುದು ಕೂಡ ವಿಶೇಷವಾಗಿದೆ.
ಅಥಣಿಗೆ ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ, ಶ್ರೀಕಾಂತ ಕುಲಕರ್ಣಿ ಹಾಗೂ ಅಣ್ಣಾ ಸಾಹೇಬ ಜೊಲ್ಲೆ ಉಸ್ತುವಾರಿಯಾಗಿದ್ದಾರೆ.
ಕಾಗವಾಡಕ್ಕೆ ಕೆ.ಎಸ್.ಈಶ್ವರಪ್ಪ, ಸಿ.ಸಿ.ಪಾಟೀಲ, ಮಹಾಂತೇಶ ಕವಟಗಿಮಠ, ಪಿ.ರಾಜೀವ, ಅರವಿಂದ ಬೆಲ್ಲದ್ ಉಸ್ತುವಾರಿಗಳು.
ಗೋಕಾಕಕ್ಕೆ ಸುರೇಶ ಅಂಗಡಿ, ಶಶಿಕಲಾ ಜೊಲ್ಲೆ, ಉಮೇಶ ಕತ್ತಿ, ಅಭಯ ಪಾಟೀಲ, ಈರಣ್ಣ ಕಡಾಡಿ, ಎ.ಎಸ್. ಪಾಟೀಲ ನಡಹಳ್ಳಿ ಉಸ್ತುವಾರಿಗಳು.
ಯಲ್ಲಾಪುರಕ್ಕೆ ಪ್ರಹಲ್ಲಾದ ಜೋಶಿ, ಕೋಟಾ ಶ್ರೀನಿವಾಸ ಪೂಜಾರಿ, ಸುನೀಲ ಕುಮಾರ, ಅನಂತಕುಮಾರ ಹೆಗಡೆ, ಹರೀಶ್ ಪೂಂಜಾ, ಲಿಂಗರಾಜ ಪಾಟೀಲ ಉಸ್ತುವಾರಿಗಳಾಗಿದ್ದಾರೆ.
ಹಿರೇಕೆರೂರಿಗೆ ಬಸವರಾಜ ಬೊಮ್ಮಾಯಿ, ಯು.ಬಿ.ಬಣಕಾರ, ಬಿ.ವೈ.ರಾಘವೇಂದ್ರ, ದತ್ತಾತ್ರಿ ಉಸ್ತುವಾರಿಗಳಾಗಿ ನೇಮಕವಾಗಿದ್ದಾರೆ.
ರಾಣೆಬೆನ್ನೂರಿಗೆ ಜಗದೀಶ ಶೆಟ್ಟರ್, ಪ್ರಭು ಚವ್ಹಾಣ, ಜಿ.ಎಂ.ಸಿದ್ದೇಶ್ವರ, ಶಿವಕುಮಾರ ಉದಾಸಿ, ಗಿರೀಶ್ ಪಟೇಲ್, ಹೊಸಪೇಟೆಗೆ ಗೋವಿಂದ ಕಾರಜೋಳ, ಎನ್.ರವಿಕುಮಾರ, ಗವಿಯಪ್ಪ, ಸಂಗಣ್ಣ ಕರಡಿ, ಹಾಲಪ್ಪಾ ಆಚಾರ್, ನಾರಾಯಣಸಾ ಬಾಂಡಗೆ, ದೇವೇಂದ್ರಪ್ಪ ಉಸ್ತುವಾರಿಗಳಾಗಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಸದಾನಂದ ಗೌಡ, ಸಿ.ಟಿ.ರವಿ, ಪಿ.ಸಿ.ಮೋಹನ್, ಜಿ.ವಿ.ಮಂಜುನಾಥ, ಬಚ್ಚೇಗೌಡ, ಎ.ಎಲ್.ಶಿವಕುಮಾರ್, ಕೆ.ಆರ್.ಪುರಕ್ಕೆ ಆರ್.ಅಶೋಕ, ಸದಾನಂದ ಗೌಡ, ಪೂರ್ಣಿಮಾ ಶ್ರೀನಿವಾಸ, ಸತೀಶ್ ರೆಡ್ಡಿ, ನಂದೀಶ್ ರೆಡ್ಡಿ, ಗೋಪಿನಾಥ ರೆಡ್ಡಿ ಉಸ್ತುವಾರಿಗಳು.
ಯಶವಂತಪುರಕ್ಕೆ ಆರ್.ಅಶೋಕ, ಶೋಭಾ ಕರಂದ್ಲಾಚೆ, ಸದಾನಂದಗೌಡ, ಅಶ್ವತ್ಥ ನಾರಾಯಣ, ಎಂ.ಕೃಷ್ಣಪ್ಪ, ಜಗ್ಗೇಶ, ಮಹಾಲಕ್ಷ್ಮಿ ಲೇಔಟ್ ಗೆ ಸೋಮಣ್ಣ, ಸುರೇಶ ಕುಮಾರ, ಸುಬ್ಬನರಸಿಂಹ ಉಸ್ತುವಾರಿಗಳು.
ಶಿವಾಜಿ ನಗರಕ್ಕೆ ನಿರ್ಮಲಕುಮಾರ ಸುರಾನಾ, ಸದಾಶಿವ, ಎಸ್.ಮುನಿರಾಜು, ಎಸ್.ರಘು, ಹೊಸಕೋಟೆಗೆ ಡಾ.ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಸಚ್ಚಿದಾನಂದ ಮೂರ್ತಿ, ಎ.ನಾರಾಯಣ ಸ್ವಾಮಿ ಉಸ್ತುವಾರಿಗಳು.
ಕೆ.ಆರ್.ಪುರಕ್ಕೆ ಮಾಧುಸ್ವಾಮಿ, ಬಿ.ವೈ.ವಿಜಯೇಂದ್ರ, ಬಿಜಿವೈಎಂ, ಶ್ರೀವತ್ಸ, ಪ್ರೀತಂ ಗೌಡ, ಹುಣಸೂರಿಗೆ ಶ್ರೀರಾಮುಲು, ಪ್ರತಾಪ ಸಿಂಹ್, ಮೈ.ವಿ.ರವಿಶಂಕರ್, ಅಪ್ಪಚ್ಚುರಂಜನ್, ವಿಜಯಶಂಕರ್ ಉಸ್ತುವಾರಿಗಳಾಗಿ ನೇಮಕವಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ