
ಪ್ರಗತಿವಾಹಿನಿ ಸುದ್ದಿ, ಪಣಜಿ: ಕಾಂಗ್ರೇಸ್, ಎಂಜಿಪಿ ಪಕ್ಷಗಳಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ೧೨ ಜನ ಶಾಸಕರ ಅನರ್ಹತೆ ಅರ್ಜಿಯನ್ನು ಗೋವಾ ವಿಧಾನಸಭೆಯ ಸಭಾಪತಿ ರಾಜೇಶ್ ಪಾಟ್ನೇಕರ್ ವಜಾಗೊಳಿಸಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿ ಸರ್ಕಾರ ಸೆಫ್ ಆದಂತಾಗಿದೆ.
ಕಳೆದ ಸುಮಾರು ಒಂದೂವರೆ ವರ್ಷದ ಹಿಂದೆ ಆಪರೇಶನ್ ಕಮಲದ ಮೂಲಕ ಕಾಂಗ್ರೇಸ್ ಪಕ್ಷದ ೧೦ ಮತ್ತು ಎಂಜಿಪಿ ಪಕ್ಷದ ೨ ಜನ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದರು. ಇವರನ್ನು ಅನರ್ಹಗೊಳಿಸುವಂತೆ ಕಾಂಗ್ರೇಸ್ ಮತ್ತು ಎಂಜಿಪಿ ಪಕ್ಷದ ಅಧ್ಯಕ್ಷರು ಸಭಾಪತಿಗಳ ಬಳಿ ಅರ್ಜಿ ಸಲ್ಲಿಸಿದ್ದರು. ಆದರೆ ವರ್ಷಗಳೇ ಕಳೆದರೂ ಕೂಡ ಈ ಕುರಿತು ಸಭಾಪತಿಗಳು ನಿರ್ಣಯ ತೆಗೆದುಕೊಳ್ಳದ ಕಾರಣ ಕಾಂಗ್ರೇಸ್ ಮತ್ತು ಎಂಜಿಪಿ ಪಕ್ಷ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕುರಿತು ಕೂಡಲೆ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ನ್ಯಾಯಾಲಯವು ಸಭಾಪತಿಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಭಾಪತಿಗಳು ತಮ್ಮ ತೀರ್ಪನ್ನು ಪ್ರಕಟಿಸಿದ್ದಾರೆ.
ಶಾಸಕರ ಅನರ್ಹತೆ ಅರ್ಜಿಯನ್ನು ವಜಾಗೊಳಿಸಿರುವ ಕುರಿತಂತೆ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಪ್ರತಿಕ್ರಿಯೆ ನೀಡಿ- ಸಭಾಪತಿಗಳ ಈ ತೀರ್ಪನ್ನು ಗೋವಾದ ಜನತೆ ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ನಾಳೆಯಿಂದ ರಾಜ್ಯಾದ್ಯಂತ ಹೊಸ ರೂಲ್ಸ್; ನೈಟ್, ವೀಕೆಂಡ್ ಕರ್ಫ್ಯೂ ; ಶಾಲೆ, ಕಾಲೇಜು ಬಂದ್; ಇಲ್ಲಿದೆ ಗೈಡ್ ಲೈನ್ಸ್