Kannada NewsKarnataka NewsLatestPolitics

*15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ ಮುಖಂಡ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 15 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಮಾಜಿ ರೌಡಿ ಶೀಟರ್, ಬಿಜೆಪಿ ಮುಖಂಡನೋರ್ವನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಆನಂದ್ ಬಂಧಿತ ಆರೋಪಿ. ಸಂಪಂಗಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿಶೀಟರ್ ಆಗಿದ್ದ ಆನಂದ್ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದ. ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದು, ರಿಯಲ್ ಎಸ್ಟೇಟ್ ನಲ್ಲಿಯು ತೊಡಗಿಸಿಕೊಂಡಿದ್ದ.

ನಿರ್ಮಾಣ ಹಂತದ ಕಟ್ಟಡದ ಮಾಲೀಕರೊಬ್ಬರಿಗೆ 15 ಲಕ್ಷ ಹಫ್ತಾ ನೀಡುವಂತೆ ಕಳೆದ ಮೂರು ತಿಂಗಳಿಂದ ಬೆದರಿಕೆ ಹಾಕುತ್ತಿದ್ದ ಬಗ್ಗೆ ಆನಂದ್ ವಿರುದ್ಧ ರಾಜಸ್ಥಾನ ಮೂಲದ ಚೌದರಿ ಎಂಬುವವರು ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಆರೋಪಿ ಆನಂದ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಆನಂದ್ ವಿರುದ್ಧ 2005ರಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. 2006ರಲ್ಲಿ ರೌಡಿಶೀಟ್ ಪಟ್ಟಿಯಿಂದ ಆತನ ಹೆಸರು ತೆಗೆಯಲಾಗಿತ್ತು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಆನಂದ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ.

Related Articles

Back to top button