ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತೀಯ ಜನತಾ ಪಾರ್ಟಿಯ ಸಂಸದೀಯ ಪಕ್ಷದ ಮಹತ್ವದ ಸಭೆ 9.30ಕ್ಕೆ ನವದೆಹಲಿಯಲ್ಲಿ ನಡೆಯಲಿದೆ.
ಪಾರ್ಲಿಮೆಂಟ್ ಲೈಬ್ರರಿ ಬಿಲ್ಡಿಂಗ್ ನ ಜಿ.ಎಂ.ಸಿ. ಬಾಲಯೋಗಿ ಸಭಾಭವನದಲ್ಲಿ ಸಭೆ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರಿಗೂ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ.
ಸಭೆಯಲ್ಲಿ ಪ್ರಮುಖವಾಗಿ ಕರ್ನಾಟಕದ ವಿದ್ಯಾಮಾನದ ಕುರಿತು ಚರ್ಚಿ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ ನಿರ್ಗಮನದ ನಂತರ ಇದೀಗ ಹೊಸ ನಾಯಕನ ಆಯ್ಕೆ ಮಾಡಬೇಕಿದೆ.
ಇದಾದ ನಂತರ ಇಂದು ಧರ್ಮೇಂದ್ರ ಪ್ರದಾನ್ ಮತ್ತು ಅರುಣ ಸಿಂಗ್ ಕರ್ನಾಟಕಕ್ಕೆ ಆಗಮಿಸಿ ಶಾಸಕರ ಸಭೆ ನಡೆಸುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಈಗಾಗಲೆ ಬೆಂಗಳೂರಿಗೆ ಆಗಮಿಸಿದ್ದಾರೆ.
ಇಂದೇ ಸಿಎಂ ಅಭ್ಯರ್ಥಿ ಆಯ್ಕೆ ನಡೆಯಲಿದ್ದು, ಘೋಷಣೆಯನ್ನು ಇಂದೇ ಮಾಡಲಾಗುವುದೋ ಅಥವಾ ಒಂದೆರಡು ದಿನ ಬಿಟ್ಟು ಮಾಡಲಾಗುವುದೋ ಖಚಿತವಾಗಿಲ್ಲ.
ಮುಖ್ಯಮಂತ್ರಿ ಸ್ಥಾನಕ್ಕೆ 4 – 5 ಜನರ ಹೆಸರಿದ್ದು, ಯಾರಿಗೆ ಪಟ್ಟ ಕಟ್ಟಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಹೊಸ ಸಿಎಂ; ಹೊಸ ಸಂಪುಟ; ಯಾರ್ಯಾರು ಔಟ್? ಯಾರ್ಯಾರು ಇನ್…?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ