ರಾಜ್ಯ ಕಾಂಗ್ರೇಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ


ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಇಂದು ಬೆಳಗಾವಿ ಚನ್ನಮ್ಮ ಸರ್ಕಲ್ ಬಳಿ ಬಿಜೆಪಿ ಪದಾಧಿಕಾರಿಗಳಿಂದ ಬೃಹತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಲರಿಗೆ ಮನವಿ ಸಲ್ಲಿಸಲಾಯಿತು.
ಮಂಡ್ಯ ಜಿಲ್ಲೆಯ ಕೆರಗೋಡುದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಡೆಸಿರುವ ಹಿಂದೂ ವಿರೋಧಿ ಕೃತ್ಯ ಖಂಡಿಸಿ ಹಾಗೂ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರುಯತ್ತಿರುವ ರಾಜ್ಯ ಸರ್ಕಾರಕ್ಕೆ ತಕ್ಷಣ ಇಂತಹ ಕೆಲಸಗಳನ್ನು ನಡೆಸದಂತೆ ನಿರ್ದೇಶನ ನೀಡಬೇಕು ಎಲ್ಲದಿದ್ದರೆ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ, ಮಂಡ್ಯ ಜಿಲ್ಲೆಯ ಕರಗೋಡು ಗ್ರಾಮದಲ್ಲಿ ಸಮಸ್ತ ಹಿಂದೂಗಳು ರಾಮಮಂದಿರ ಉದ್ಗಾಟನೆಯ ನಿಮಿತ್ಯ ಗ್ರಾಮದಲ್ಲಿ ೧೦೮ ಅಡಿಯ ನೂತನ ಧ್ವಜ ಸ್ಥಂಬ ನಿರ್ಮಿಸಿ, ಹಿಂದೂಗಳು ಹನುಮನ ಧ್ವಜ ಧ್ವಜಾರೋಹಣ ಮಾಡಿ ಸಂಭ್ರಮ ಆಚರಿಸಿದ್ದರು. ಕುಂಟು ನೆಪ ಒಡ್ಡಿ ಅಲ್ಪಸಂಖ್ಯಾತರ ಒಲೈಕೆಯಲ್ಲಿ ಮೂಳಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆ ತರುವದರೊಂದಿಗೆ ಹಿಂದೂಗಳನ್ನು ಹತ್ತಿಕ್ಕಲು ಹುನ್ನಾರು ನಡೆಸಿದೆ. ಹಿಂದೂ ಸಂಘಟನೆಯ ದೇಶಭಕ್ತಿ ಚಟುವಟಿಕೆಗಳನ್ನು ಹತ್ತಿಕಲು ಸಂಚು ನಡೆಸಿದೆ. ಹಿಂದೂ ಕಾರ್ಯಕರ್ತರ ಮೇಲೆ ಲಾಟಿಚಾರ್ಜ್ ಮಾಡಿದೆ. ಇದನ್ನು ಪ್ರತಿಭಟಿಸಿದ ನಮ್ಮ ನಾಯಕರು ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡುವ ನಾಟಕಿಯ ಕೃತ್ಯ ಎಸಗುವದರೊಂದಿಗೆ, ಹಿಂದೂ ಧಾರ್ಮಿಕ ಧ್ವಜಗಳ ತೆರವು ಕಾರ್ಯಮಾಡಿ ಕೊಮು ಗಲಬೆ ಹರಡಲು ಪ್ರಚೋಧನೆ ಮಾಡುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಬೇಕು. ಇವರು ಹೀಗೆ ಮುಂದುವರೆದರೆ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಲ್ಲಿ ನಾನು ಈ ಮೂಲಕ ವಿನಂತಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ, ಉಜ್ವಲಾ ಬಡವಾನಾಚೆ, ಎಂ.ಬಿ.ಜಿರ್ಲಿ, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಗೀತಾ ಸುತಾರ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ