ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ 20 ಅಭ್ಯರ್ಥಿಗಳ ಹೆಸರಿದೆ.
ಬೆಳಗಾವಿಯಿಂದ ಹಾಲಿ ಸದಸ್ಯ ಮಹಾಂತೇಶ ಕವಟಗಿಮಠ, ಧಾರವಾಡದಿಂದ ಪ್ರದೀಪ ಶೆಟ್ಟರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದಿಂದ ಡಿ.ಎಸ್. ಅರುಣ್, ಕೊಡಗಿನಿಂದ ಸುಜಾ ಕುಶಾಲಪ್ಪ, ದಕ್ಷಿಣ ಕನ್ನಡ ಕೋಟ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರು ಎಂ.ಕೆ.ಪ್ರಾಣೇಶ ಹೆಸರಿದೆ.
ಉತ್ತರ ಕನ್ನಡ ಗಣಪತಿ ಉಳ್ವೇಕರ್, ಮೈಸೂರು ರಘು ಕೌಟಿಲ್ಯ, ಕಲಬುರಗಿ, ಬಿ.ಜಿ.ಪಾಟೀಲ, ಚಿತ್ರದುರ್ಗ ಕೆ.ಎಸ್.ನವೀನ್, ಹಾಸನ ವಿಶ್ವನಾಥ, ಬೆಂಗಳೂರು ಗೋಪಿನಾಥ ರಡ್ಡಿ, ಮಂಡ್ಯ ಮಂಜು, ಕೋಲಾರ ವೇಣುಗೋಪಾಲ, ಬೀದರ್ ಪ್ರಕಾಶ ಖಂಡ್ರೆ.
ಇಲ್ಲಿದೆ ಸಂಪೂರ್ಣ ಪಟ್ಟಿ –
ಪರಿಷತ್ ಚುನಾವಣೆ: ಬೆಳಗಾವಿ ಸೇರಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ