ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತಿದ್ದಂತೆ ಆಡಳಿತ ಹಾಗೂ ವಿಪಕ್ಷ ನಾಯಕರ ವಾಕ್ಸಮರ ತಾರಕಕ್ಕೇರಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಕರೆದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ನಾಯಕರಿಗೆ ಮುಸ್ಲಿಂ ಹೆಸರು ಸೇರಿಸಿ ಟ್ವೀಟ್ ಮಾಡಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಈಗ ಮುಲ್ಲಾ, ಖಾನ್ ವಾರ್ ಆರಂಭವಾಗಿದೆ.
ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರು ಟ್ಯಾಗ್ ಮಾಡಿ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದ್ದು, ಜಗದೀಶ್ ಶೆಟ್ಟರ್, ಆರ್.ಅಶೋಕ್ ಅವರಿಗೆ ಖಾನ್ ಹೆಸರು ಸೇರಿಸಿದೆ. ಅಲ್ಲದೇ ಮುಖ್ಯಮಂತ್ರಿಗಳಿಗೆ ಬೊಮ್ಮಾಯುಲ್ಲಾಖಾನ್ ಎಂದು ವ್ಯಂಗ್ಯವಾಡಿದೆ. ಕಾಂಗ್ರೆಸ್ ಟ್ವೀಟ್ ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದು, ನಮ್ಮನ್ನು ‘ಹಿಂದೂ ಹುಲಿ’ ಎಂದು ಕರೆಯಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಿ.ಟಿ.ರವಿ, ನನ್ನನ್ನು ಮುಲ್ಲಾ ಅಂತ ಕರೆಯೋಕ್ಕಾಗಲ್ಲ, ಹಿಮ್ದೂ ಹುಲಿ ಅಂತಾನೇ ಕರಿಯಬೇಕು. ಮುಲ್ಲಾ ಅಂತ ಕರೆದರೆ ನನ್ನನ್ನು ಮುಲ್ಲಾಗಳೂ ಒಪ್ಪಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ ಕಾಂಗ್ರೆಸ್ ನವರು ಹಾಗೆ ಕರೆಯಲಿ. ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ದರೆ ಖಂಡಿತಾ ಕರೆಯಬಹುದು ಎಂದು ಟಾಂಗ್ ನೀಡಿದ್ದಾರೆ.
ನನ್ನನ್ನು ಮುಲ್ಲಾ ಎಂದು ಕರೆಯಲು ಆಗಲ್ಲ ‘ಹಿಂದೂ ಹುಲಿ’ ಎನ್ನಬಹುದು. ಮುಲ್ಲಾ ಎಂದು ಕರೆದರೆ ನನ್ನನ್ನು ಮುಲ್ಲಾಗಳೂ ಕೂಡ ಒಪ್ಪಲ್ಲ. ನಮ್ಮ ಸ್ವಭಾವಕ್ಕೆ ತಕ್ಕಂತೆ ಬಿರುದು ಬರುತ್ತದೆ. ಶಾಧಿ ಭಾಗ್ಯ ಮಾಡಿದವರಿಗೆ ಮುಲ್ಲಾ ಹೆಸರು ಅನ್ವಯ ಆಗುತ್ತದೆ. ಬೆಂಕಿ ಹಾಕಿದರೂ ಕೂಡ ಅಮಾಯಕರು ಎನ್ನುವವರಿಗೆ ಅನ್ವಯ ಆಗಲಿದೆ. ಪ್ರೀತಿಯಿಂದ ಮುಸ್ಲಿಂ ಟೋಪಿ ಹಾಕಿಕೊಳ್ಳೋರಿಗೆ ಅನ್ವಯ ಆಗಲಿದೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ರೆಪೋ ದರ ಹೆಚ್ಚಳ; RBI ಹಣಕಾಸು ನೀತಿ ಪ್ರಕಟ
https://pragati.taskdun.com/rbi-monetary-policy-repo-rate-hikeby-35-bps/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ