ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉಪಚುನಾವಣಾ ಪ್ರಚಾರದ ಬರದಲ್ಲಿ ಪರಸ್ಪರ ವಾಕ್ಸಮರ ನಡೆಸುತ್ತಿರುವ ರಾಜಕೀಯ ಪಕ್ಷಗಳ ನಾಯಕರು ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಮತಭೇಟೆ ಬರದಲ್ಲಿ ತಾಳ್ಮೆ ಕಳೆದೊಂಡು ಎಲ್ಲೆ ಮೀರಿದ ಮಾತುಗಳನ್ನಾಡುತ್ತಿದ್ದಾರೆ.
ಪದೇ ಪದೇ ಆರ್.ಎಸ್. ಎಸ್ ಬಗ್ಗೆ ಮಾತನಾಡುತ್ತಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟ್ವಿಟರ್ ನಲ್ಲಿ ತುರುಗೇಟು ನೀಡಿರುವ ರಾಜ್ಯ ಬಿಜೆಪಿ ‘ಬೈಗಮಿ’ಎಂಬ ಶಬ್ದ ಬಳಸುವ ಮೂಲಕ ಹೆಚ್.ಡಿ.ಕೆಗೆ ಇಬ್ಬರು ಹೆಂಡತಿಯರು’ ಎಂಬರ್ಥದಲ್ಲಿ ವೈಯಕ್ತಿಕವಾಗಿ ಟೀಕೆ ಮಾಡಿದೆ.
ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಅವುಗಳ ಪಟ್ಟಿ ಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ ಕುಮಾರಸ್ವಾಮಿಯವೇ ಎಂದಿರುವ ಬಿಜೆಪಿ. ಇವೆಲ್ಲವೂ ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧವೂ ಹೌದು ಎಂದು ಕಿಡಿಕಾರಿದೆ.
* ಸಿಗ್ನಲ್ ಜಂಪ್
* ವಿಶ್ವಾಸದ್ರೋಹ (ಬ್ರೀಚ್ ಆಫ್ ಟ್ರಸ್ಟ್)
* ಭ್ರಷ್ಟಾಚಾರ
* ಸ್ವಜನಪಕ್ಷಪಾತ
* ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ
ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಹೆಚ್.ಡಿ.ಕುಮಾರಸ್ವಾಮಿಯವರೇ ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ? ಎಂದು ಹೇಳಿದೆ.
ರಮೇಶ್ ಜಾರಕಿಹೊಳಿ ಪರ ಆಪ್ತರ ಮನವಿ; ಸಚಿವ ಸ್ಥಾನ ನೀಡುವಂತೆ ಆಗ್ರಹ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ