ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಮತೆ ಭಾರಿ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಪ್ರವಾಸದಲ್ಲಿದ್ದ ವೇಳೆ ಪ್ರಧಾನಿ ಮೋದಿಯವರಿದ್ದ ಹೆಲಿಕಾಪ್ಟರ್ ಏಕ್ ಆಫ್ ಆಗುವಾಗ ಕಪ್ಪು ಬೆಲೂನ್ ಹಾರಿ ಬಿಡಲಾಗಿದೆ.
ಆಂಧ್ರದ ಗನ್ನಾವರಂ ಏರ್ ಪೋರ್ಟ್ ಸಮೀಪದ ಕೇಸರಪಲ್ಲಿ ಎಂಬಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಟೇಕ್ ಆಫ್ ಆಗುವಾಗ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬೆಲೂನ್ ಹಾರಿ ಬಿಟ್ಟಿದ್ದಾರೆ. ಇದರ ಹಿಂದಿನ ಹುನ್ನಾರವೇನು? ಎಂಬ ಪ್ರಶ್ನೆ ಉದ್ಭವವಾಗಿದೆ.
ಪ್ರಧಾನಿ ಮೋದಿ ಆಗಮನ ವಿರೋಧಿಸಿ ಕಾಂಗ್ರೆಸ್ ನಾಯಕ ರಾಜೀವ್ ರತನ್ ಕಪ್ಪು ಬಲೂನ್ ಹಾರಿ ಬಿಡುವ ಪ್ರತಿಭಟನೆ ನಡೆಸಿದ್ದರು. ಆಂಧ್ರ ಪ್ರದೇಶದ ಕಾಂಗ್ರೆಸ್ ಸಮನ್ವಯ ಸಮಿತಿ ಸದಸ್ಯೆ ಸುಂಕರ ಪದ್ಮಶ್ರೀ ಗೋ ಬ್ಯಾಕ್ ಮೋದಿ ಎಂಬ ಘೋಷಣೆ ಕೂಘುತ್ತಾ ಮಹಿಳಾ ಕಾರ್ಯಕರ್ತೆಯರೊಂದಿಗೆ ಕಪ್ಪು ಬೆಲೂನ್ ಗುಚ್ಛ ಹಾರಿ ಬಿಟ್ಟಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ್ದ ಕೈ ಕಾರ್ಯಕರ್ತರನ್ನು ಪೊಲಿಸರು ವಶಕ್ಕೆ ಪಡೆದಿದ್ದು, ಅನುಮತಿಯಿಲ್ಲದೇ ಕಪ್ಪು ಬಲೂನ್ ಹಾರಿಬಿಟ್ಟ ಕಾಂಗ್ರೆಸ್ ಮುಖಂಡರನ್ನು ವಿಚಾರಣೆಗೊಳಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ