Latest

ಹರ್ಷ ಕೊಲೆ ಆರೋಪಿಗಳ ಬಳಿ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ಪತ್ತೆ; ಜೈಲಿನಲ್ಲಿ ಬಿಂದಾಸ್ ಆಗಿರುವ ಕೈದಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದು, ಸೆರೆವಾಸದಲ್ಲಿದ್ದರೂ ಆರೋಪಿಗಳಿಗೆ ರಾಜಾತಿಥ್ಯ ಲಭ್ಯವಾಗುತ್ತಿದ್ದು, ಆರಾಮಾಗಿ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ.

ಹರ್ಷ ಕೊಲೆ ಆರೋಪಿಗಳಾದ ಖಾಸೀಫ್ ಹಾಗೂ ಆತನ ಗ್ಯಾಂಗ್ ಇರುವ ಸೆಲ್ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಆರೋಪಿಗಳ ಬಳಿ ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ.

Home add -Advt

ಆರೋಪಿಗಳು ಜೈಲಿನಿಂದಲೇ ತಮ್ಮ ಕುಟುಂಬದವರು ಹಾಗೂ ಇನ್ನಿತರರ ಜತೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಾ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಇಷ್ಟಕ್ಕೂ ಜೈಲಿನಲ್ಲಿದ್ದ ಕೈದಿಗಳ ಬಳಿ ಮೊಬೈಲ್ ಫೋನ್ ಬಂದಿದ್ದಾರೂ ಹೇಗೆ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

ADGP ಅಮೃತ್ ಪೌಲ್ ಬಂಧನ

Related Articles

Back to top button