Latest

ಬ್ಲ್ಯಾಕ್ ಫಂಗಸ್ ಗೆ ಹೆಡ್ ಕಾನ್ಸ್ ಟೇಬಲ್ ಬಲಿ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಕೊರೊನಾ ಎರದನೇ ಅಲೆ ಅಟ್ಟಹಾಸದ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಮಹಾಮಾರಿ ಅಬ್ಬರ ಹೆಚ್ಚುತ್ತಿದ್ದು, ಕಪ್ಫು ಶಿಲೀಂಧ್ರಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯ ಹೆಡ್ ಕಾನ್ಸ್ ಟೇಬಲ್ ಓರ್ವರು ಇದೀಗ ಬ್ಲ್ಯಾಕ್ ಫಂಗಸ್ ಗೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಕಲಬುರ್ಗಿ ಜಿಲ್ಲೆಯ ಅಶೋಕ ನಗರದ ಹೆಡ್ ಕಾನ್ಸ್ ಟೇಬಲ್ ಕೊರೊನಾಸೋಂಕಿನಿಂದ ಗುಣಮುಖರಾಗಿದ್ದರು. ಆದರೆ ಕೊರೊನಾದಿಂದ ಚೇತರಿಕೆ ಬಳಿಕ ಅವರಿಗೆ ಕಣ್ಣು ಕಾಣುತ್ತಿರಲಿಲ್ಲ. ಮಧುಮೇಹ ಕೂಡ ತೀವ್ರ ಹೆಚ್ಚಳವಾಗಿತ್ತು. ಇದೀಗ. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಈ ಬ್ಲ್ಯಾಕ್ ಫಂಗಸ್ ಹೆಚ್ಚು ಪತ್ತೆಯಾಗುತ್ತಿದ್ದು, ಬ್ಲ್ಯಾಕ್ ಫಂಗಸ್ ನಿಂದಲೇ ಹೆಡ್ ಕಾನ್ಸ್ ಟೇಬಲ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ತೌಕ್ತೆ ಚಂಡಮಾರುತ; ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ

Home add -Advt

Related Articles

Back to top button