ಪ್ರಗತಿವಾಹಿನಿ ಸುದ್ದಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ ಗೆಳತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಬರೋಬ್ಬರಿ 2.5 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕುಮಾರ್ ಎಂಬಾತ 20 ವರ್ಷದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆಕೆ ಶ್ರೀಮಂತೆ ಎಂದು ತಿಳಿದ ತಕ್ಷಣ ಸಿನಿಮಾ, ಪಬ್, ರೆಸಾರ್ಟ್, ಪಾರ್ಟಿ ಎಂದೆಲ್ಲಾ ಸುತ್ತಾಡಿಸಿ ಆಕೆಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ.
ಅಷ್ಟೇ ಅಲ್ಲದೆ ಯುವತಿಯ ಖಾಸಗಿ ಪೋಟೋ ವಿಡಿಯೋಗಳನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದಾನೆ. ನಂತರ, ನನಗೆ ಏನೋ ಸ್ವಲ್ಪ ಹಣ ಬೇಕಿದೆ ಕೊಡು ಎಂದು ಕೇಳಿದಾಗ ಯುವತಿ ನಿರಾಕರಣೆ ಮಾಡಿದ್ದಾಳೆ. ಇದರಿಂದ ಸಿಟ್ಟಾದ ಕುಮಾರ್ ಹಣ ಕೊಡದಿದ್ದರೆ ನಿನ್ನ ಖಾಸಗಿ ಫೋಟೋ ಸೋಶಿಯಲ್ ಮೀಡಿಯಾಗೆ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ವೇಳೆ ಈ ವಿಚಾರ ಮನೆಯವರಿಗೂ ಗೊತ್ತಾಗಿದ್ದು ಮನೆಯವರಿಂದ ಹಾಗೂ ಅಜ್ಜಿಯ ಖಾತೆಯಿಂದ 1.25 ಕೋಟಿ ಹಾಗೂ 1.32 ಕೋಟಿ ಹಣವನ್ನು ಹಾಕಿಸಿಕೊಂಡಿದ್ದಾನೆ. ಜೊತೆಗೆ ತನಗಾಗಿ ಬೈಕ್, ಚಿನ್ನಾಭರಣ, ಬೆಲೆ ಬಾಳುವ ವಾಚ್‌ಗಳನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾನೆ.
ಇಷ್ಟಕ್ಕೆ ನಿಲ್ಲಿದ ಆರೋಪಿ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಬೇಸತ್ತ ಯುವತಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಚಿನ್ನಾಭರಣವನ್ನು ರಿಕವರಿ ಮಾಡಿ ವಾಪಸ್ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ