CrimeKannada NewsKarnataka News

*ಮೈಸೂರು ಅರಮನೆ ಮುಂದೆ ಬ್ಲಾಸ್ಟ್: ದೇಹಗಳು ಛಿದ್ರ ಛಿದ್ರ*

ಪ್ರಗತಿವಾಹಿನಿ ಸುದ್ದಿ: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಅರಮನೆಯ  ಮುಂಭಾಗದಲ್ಲೇ ಬಲೂನ್ ಗಳಿಗೆ ತುಂಬಿಸುವ ನೈಟ್ರೋಜನ್‌ ಗ್ಯಾಸ್‌ ಸ್ಪೋಟಗೊಂಡಿದೆ.

ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಆವರಣದಲ್ಲಿ ಬಲೂನುಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಈ ಸ್ಪೋಟ ಉಂಟಾಗಿದೆ. ಈ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಓರ್ವ ಮಹಿಳೆ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಸಲಿಂ ಮೃತ ದುರ್ದೈವಿ. ಬಲೂನು ಮಾರಾಟ ಮಾಡುತ್ತಿದ್ದ. ಹೀಲಿಂ ಗ್ಯಾಸ್ ಸಿಲಿಂಡರ್ ನಿಂದ ಗ್ಯಾಸ್ ಪಂಪ್ ಮಾಡುವಾಗ ಒತ್ತಡದಿಂದಾಗಿ ಸ್ಫೋಟ ಸಂಭವಿಸಿದೆ.

ಸದ್ಯ ಗಾಯಾಳುಗನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕೃಷ್ಣರಾಜ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದಾರೆ.

Home add -Advt

Related Articles

Back to top button