Latest

ಕಾಸರಕೋಡ್ ಕಡಲ ತೀರಕ್ಕೆ ಬ್ಲ್ಯೂ ಫ್ಲಾಗ್ ಮಾನ್ಯತೆ : ಉಕಕ್ಕೆ ಅವಿಸ್ಮರಣೀಯ ದಿನ

 ಪ್ರಗತಿವಾಹಿನಿ ಸುದ್ದಿ, ಹೊನ್ನಾವರ  – ಫೌಂಡೇಶನ್‌ ಫಾರ್‌ ಎನ್ವಿರಾನ್‌ಮೆಂಟಲ್‌ ಎಜುಕೇಶನ್‌ (Foundation for Environmental Education ) ಎಂಬ ಸಂಸ್ಥೆಯು ನೀಡುವ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಬ್ಲ್ಯೂ ಫ್ಲಾಗ್ ಮಾನ್ಯತೆಯು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ” ಇಕೋ ಬೀಚ್ ” ಕಡಲ ತೀರಕ್ಕೆ ದೊರಕಿದೆ.
ವಿಶ್ವದ ಅತ್ಯಂತ ಸ್ವಚ್ಚ ಕಡಲ ತೀರಗಳ ಸಾಲಿಗೆ ಇಂದಿನಿಂದ ನಮ್ಮ ಜಿಲ್ಲೆಯ ಕಡಲ ತೀರವು ಸಹ ಸೇರ್ಪಡೆಗೊಂಡಿರುವುದು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೆರಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಇಂದು ಜಿಲ್ಲೆಯ ಜನತೆಗೆ ಅವಿಸ್ಮರಣೀಯ ದಿನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.
ಜಿಲ್ಲೆಯ ಜನತೆಯ ಸಹಕಾರದೊಂದಿಗೆ ಜಿಲ್ಲೆಯ ಪ್ರತಿಯೊಂದು ಪ್ರವಾಸಿ ತಾಣಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು, ಪ್ರವಾಸಿ ತಾಣಗಳ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಅದನ್ನು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Related Articles

Back to top button