Kannada NewsLatest

ಭೀಕರ ಅಪಘಾತ; ಆಂಬುಲೆನ್ಸ್ ನಲ್ಲೇ ಪ್ರಾಣ ಬಿಟ್ಟ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಘಟಪ್ರಭಾ: ಬೈಕ್ ಹಾಗೂ ಆಲ್ಟೋ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿರುವ ಘಟನೆ ಬೆಳಗಾವಿಯ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.

ಗೋಕಾಕ ದಿಂದ ತುಕಾನಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಹಾಗೂ ನಾಗನೂರ್ ದಿಂದ ಗೋಕಾಕ ಕಡೆ ತೆರಳುತ್ತಿದ್ದ ಆಲ್ಟೋ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ ಮಹಾದೇವ ಬೋಜಿ (37) ಹಾಗೂ ಲಕ್ಷ್ಮಿ ಭೋಜಿ (32) ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಮಹಿಳೆ ಲಕ್ಷ್ಮಿ ಭೋಜಿ ಕೊನೆಯುಸಿರೆಳೆದಿದ್ದಾರೆ.

Home add -Advt

ಮಹಿಳೆಯ ಒಡವೆ ಹಾಗೂ ಸಾವಿರಾರು ರೂಪಾಯಿಗಳನ್ನು ಅವರ ಸಂಬದಿಕರಿಗೆ ಘಟಪ್ರಭಾ ಆರೋಗ್ಯ ಕವಚದ ಸಿಬ್ಬಂದಿ ಪೈಲೆಟ್ ಜಂಗ್ಲಿಸಾಬ ಅತ್ತಾರ ಹಾಗೂ ಇ. ಎಂ.ಟಿ.ಕೌಸರ.ಪಾಶ್ಚಾಪುರ ಇವರುಗಳು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ

ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಯಾಣಿಕನ ಮೇಲೆ ಹರಿದ ರೈಲು; ನಿಲ್ದಾಣದಲ್ಲೇ ದುರಂತ

Related Articles

Back to top button