Latest

ಬಿಎಂಆರ್ ಸಿಎಲ್ ನಲ್ಲಿ ಉದ್ಯೋಗಾವಕಾಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಎಂಆರ್ ಸಿ ಎಲ್-ಬೆಂಗಳೂರು ಮೆಟ್ರೋ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬಿಎಂ ಆರ್ ಸಿ ಎಲ್ ನ ಎರಡು ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಬಿ.ಇ/ಬಿ.ಟೆಕ್ ಪದವಿ ಪಡೆದವರಾಗಿರಬೇಕು. 5-8 ವರ್ಷಗಳ ಅನುಭವ ಹೊಂದಿರುವವರಾಗಿದ್ದು 55 ವರ್ಷದೊಳಗೆ ಇರುವವರು ಅರ್ಜಿ ಸಲ್ಲಿಸಬಹುದು.

ಲಿಖಿತ ಪರೀಕ್ಷೆ, ನೇರ ಸಂದರ್ಶನ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆಗಳ ಮೂಲಕ ಆಯ್ಕೆ ನಡೆಯಲಿದೆ. ಡೆಪ್ಯೂಟಿ ಚೀಫ್ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 1ಲಕ್ಷದ 40 ಸಾವಿರ ರೂಪಾಯಿ ಸಂಬಳವಿರಲಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಏಪ್ರಿಲ್ 8.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ bmrc.co.in ವೆಬ್ ಸೈಟ್ ಗೆ ಭೇಟಿ ನೀಡಬಹುದು.

Home add -Advt

 

Related Articles

Back to top button