ಬಸ್ ಅಪಘಾತಕ್ಕೆ ಮತ್ತೋರ್ವ ಯೋಧ ಸಾವು; ರಜೆ ಕಳೆಯಲೆಂದು ಬಂದು ದುರಂತ ಅಂತ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಅನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.

22 ವರ್ಷದ ಚೇತನ್ ಮೃತ ಯೋಧ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಬಳಿ ನವೆಂಬರ್ 7ರಂದು ಬಿಎಂ ಟಿಸಿ ಬಸ್ ಡಿಕ್ಕಿಯಾಗಿ ಯೋಧ ಚೇತನ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಯೋಧನನ್ನು ಯಲಹಂಕದ ಕಮಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಮೃತ ಯೋಧ ಮೂಲತ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದವರು. ಯೋಧ ಚೇತನ್ ತಂದೆ ಸುರೇಶ್ ಕೂಡ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಚೇತನ್ ಕೂಡ ಭಾರತೀಯ ಸೇನೆ ಸೇರಿದ್ದರು. ಮೂರು ವರ್ಷಗಳಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೇತನ್ ರಜೆ ಮೇಲೆ ಕುಟುಂಬದವರ ಜೊತೆ ಕಾಲ ಕಳೆಯಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಬಸ್ ಅಪಘಾತವಾಗಿ ದುರಂತ ಸಂಭವಿಸಿದೆ.

ಕಾಂಗ್ರೆಸ್ ನಾಯಕಿಗೆ ಬೆಳ್ಳಂ ಬೆಳಿಗ್ಗೆ IT ಶಾಕ್

https://pragati.taskdun.com/it-raidcongress-leadergayatri-shanegowda/

Related Articles

Back to top button