Latest

ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ಹುಲಿ ಶೂಟ್ ಮಾಡಿದ ಯುವಕ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಯುವಕನೊಬ್ಬ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಿದ್ದಾಪುರ ನಡುವಿನ ಅರಣ್ಯ ಪ್ರದೇಶದಲ್ಲಿ ಕೇವಲ 15 ಅಡಿಗಳ ಅಂತರದಲ್ಲಿ ಹುಲಿಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.
ಸವದತ್ತಿ ತಾಲೂಕಿನ ಯರಗಟ್ಟಿ ಬಳಿಯ ರೈನಾಪುರ ಯುವಕ ಹರೀಶ ಕರಿಗನ್ನವರ ಹುಲಿಯ ಫೋಟೋ ಶೂಟ್ ಮಾಡಿದ ಯುವಕ.
         ಸಿಮೆಂಟ್, ಇಟ್ಟಿಗೆ ಮತ್ತಿತರ ಉತ್ಪಾದನೆಗಳ ತಯಾರಿಕೆ ಕಾರ್ಖಾನೆಯ ಮಾಲಿಕರಾದ ಹರೀಶ ತಮ್ಮ ಬಿಜಿನೆಸ್ ಗಾಗಿ ಆ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿಗೆ ಕಾರು ನಿಲ್ಲಿಸಿದ್ದರು. ಜೊತೆಗೆ ಗೆಳೆಯರೂ ಇದ್ದರು. ಅರಣ್ಯದೊಳಗಿಂದ ಹುಲಿಯೊಂದು ಇವರ ಸಮೀಪದಲ್ಲಿಯೇ ರಸ್ತೆಗೆ ಇಳಿಯಿತು. ಆದರೆ ಅದು ಇವರತ್ತ ಮುಖ ಮಾಡಲಿಲ್ಲ. ಇವರು ಮಾತು ನಿಲ್ಲಿಸಿ ಮೌನವಾದರು. ನಿಂತಲ್ಲೇ ನಿಂತರು. ಮೊಬೈಲ್ ತೆಗೆದು ಕ್ಲಿಕ್ ಮಾಡಿದರು. ಹುಲಿ ತನ್ನಷ್ಟಕ್ಕೆ ತಾನೆ ಹೊರಟು ಹೋಯಿತು. ಮನುಷ್ಯರ ಇರುವಿಕೆಯನ್ನು ಗುರುತಿಸಿ ಇವರತ್ತ ನೋಡಿದ್ದರೆ ಅಪಾಯವಿತ್ತು.

Related Articles

Back to top button