Kannada NewsKarnataka NewsLatest

 ಸಾವಿತ್ರಿಬಾಯಿ ಫುಲೆ ಸ್ವಸಹಾಯ ಸಂಘ ಉದ್ಘಾಟಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕಂಗ್ರಾಳಿ ಕೆ ಎಚ್ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ಸ್ಪೂರ್ತಿ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ಸ್ವ-ಸಹಾಯ ಸಂಘವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಸಂಜೆ ಉದ್ಘಾಟಿಸಿದರು.
 
ಮಹಿಳೆಯರು ದಿನದಿಂದ ದಿನಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿರುವುದು ಖುಷಿಯ ಸಂಗತಿ. ಕೇವಲ ಕುಟುಂಬಕ್ಕೆ ಸೀಮಿತವಾಗದೆ ಸಮಾಜ ಸೇವೆ, ಉದ್ಯಮ ಸೇರಿದಂತೆ ಎಲ್ಲ ಕಡೆ ಗುರುತಿಸಲ್ಪಡುತ್ತಿದ್ದಾರೆ, ಸಾಧನೆಗೈಯ್ಯುತ್ತಿದ್ದಾರೆ. ಮನೆಯ ಜವಾಬ್ದಾರಿಯ ಜೊತೆಗೆ ಸಮಾಜದ ಜವಾಬ್ದಾರಿಯನ್ನೂ ಹೊರಲು ಮುಂದೆ ಬರುತ್ತಿದ್ದಾರೆ. ಇದು ಸಮಾಜ ಇನ್ನಷ್ಟು ಬೆಳಕಿನತ್ತ ಸಾಗುತ್ತಿರುವುದರ ಮುನ್ಸೂಚನೆಯಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಹಿಳೆಯರು ಬೆಳೆಯುವುದಕ್ಕೆ ಎಲ್ಲ ರೀತಿಯ ಅವಕಾಶ ಹಾಗೂ ಸಹಾಯ ಒದಗಿಸಲಾಗುವುದು. ಇದಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಹಿಳೆಯರಿಗೆ ಎಲ್ಲ ಕಡೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಮಯದಲ್ಲಿ ಜಯಶ್ರೀ ಸೂರ್ಯವಂಶಿ, ಅಜಿತ್ ಮಾದರ, ದೀಪಮಾಲಾ, ಪೂಜಾ‌ ಕಾಂಬಳೆ, ಯಲ್ಲಪ್ಪ ಪಾಟೀಲ, ಬಾಳಾರಾಮ ಪಾಟೀಲ, ರೇಖಾ ಈಡಿಕರ್ ಮೊದಲಾದವರು ಇದ್ದರು.

Related Articles

Back to top button