
ಪ್ರಗತಿವಾಹಿನಿ ಸುದ್ದಿ: ನದಿಯಲ್ಲಿ 100 ಕ್ಕೂ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಅಪಘಾತವಾಗಿ 60 ಜನರು ಸಾವನ್ನಪ್ಪಿರುವ ಘಟನೆ ಉತ್ತರ-ಮಧ್ಯ ನೈಜೀರಿಯಾದಲ್ಲಿ ನಡೆದಿದೆ.
ಉತ್ತರ-ಮಧ್ಯ ನೈಜೇರಿಯಾದ ಮಲಾಲೆ ಜಿಲ್ಲೆಯ ತುಂಗನ್ ಸುಲೆಯಿಂದ ಹೊರಟ ಹಡಗು ದುಗ್ಗವನ್ನು ಸಮೀಪಿಸುತ್ತಿದ್ದಾಗ, ಗೌಸಾವಾ ಸಮುದಾಯದ ಬಳಿ ನೈಜರ್ ರಾಜ್ಯದ ಬೊರ್ಗು ಪ್ರದೇಶದಲ್ಲಿ ಮುಳುಗಿದ ಮರದ ಕಾಂಡಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 60 ಕ್ಕೆ ಏರಿದೆ. ಹತ್ತು ಜನರ ಸ್ಥಿತಿ ಗಂಭೀರವಾಗಿದೆ ಮತ್ತು ಅನೇಕರನ್ನು ಇನ್ನೂ ಹುಡುಕಲಾಗುತ್ತಿದೆ” ಎಂದು ಬಾಬಾ ಅರಾ ರಾಯಿಟರ್ಸ್ಸೆ ತಿಳಿಸಿದರು.
ಬೊರ್ಗು ಸ್ಥಳೀಯ ಸರ್ಕಾರಿ ಪ್ರದೇಶದ ಅಧ್ಯಕ್ಷ ಅಬ್ದುಲ್ಲಾಹಿ ಬಾಬಾ ಅರಾ ಅವರ ಪ್ರಕಾರ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.