Latest

ಬಾಲಿವುಡ್ ನಟ, ನಟಿಯರ ಅಂಗರಕ್ಷಕರಿಗೆ ಕೋಟಿ ಕೋಟಿ ವೇತನ !

ಪ್ರಗತಿವಾಹಿನಿ ಸುದ್ದಿ, ಮುಂಬಯಿ: ಅಂಗರಕ್ಷಕರು ಎಂದರೆ ಸಾಮಾನ್ಯ ರೀತಿಯಲ್ಲಿ ನೋಡುವವರೇ ಹೆಚ್ಚು. ಬಹುತೇಕವಾಗಿ ರಾಜಕಾರಣಿಗಳ ಖರ್ಚು, ವೆಚ್ಚಗಳ ಬಗ್ಗೆಯೇ ತಲೆಕೆಡಿಸಿಕೊಳ್ಳುವವರ ಸಂಖ್ಯೆ ಹೆಚ್ಚು. ಆದರೆ ಬಾಲಿವುಡ್ ಕೆಲ ನಟ, ನಟಿಯರ ಅಂಗರಕ್ಷಕರು ಅಂತಿಂಥ ಸಾಮಾನ್ಯರಲ್ಲ ಎಂಬುದೀಗ ಬಹಿರಂಗವಾಗಿದೆ.

ಬಾಲಿವುಡ್ ತಾರೆಯರ ಅಂಗರಕ್ಷಕರ ಆದಾಯ ಕೇಳಿದರೆ ಜನಸಾಮಾನ್ಯರು ಹೌಹಾರುವುದರಲ್ಲಿ ಅಚ್ಚರಿಯಿಲ್ಲ. ಕಾರಣ ಇವರ ಆದಾಯ ತಿಂಗಳಿಗೆ ಕೋಟಿ ಕೋಟಿ..!

ನಟ ಶಾರೂಖ್ ಖಾನ್ ಅಂಗರಕ್ಷಕ ರವಿ ಸಿಂಗ್ ಮಾಸಿಕ ವೇತನ 2.7 ಕೋಟಿ ರೂ. ಇವರು ಗರಿಷ್ಠ ಸಂಬಳ ಪಡೆಯುವ ಬಾಡಿಗಾರ್ಡ್ ಎಂದು ಪರಿಗಣಿಸಲಾಗಿದೆ. ಅಮೀರ್ ಖಾನ್ ಅಂಗರಕ್ಷಕ ಯುವರಾಜ್ 2 ಕೋಟಿ ರೂ. ಪಡೆಯುತ್ತಿದ್ದರೆ ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ 2 ಕೋಟಿ ರೂ. ಪಡೆಯುತ್ತಿದ್ದಾರೆ. ನಟಿ ದೀಪಿಕಾ ಜಲಾಲ್ ಅಂಗರಕ್ಷಕ ಜಲಾಲ್ ಗೆ 1.2 ಕೋಟಿ ರೂ. ವೇತನವಿದೆ.

Home add -Advt

Related Articles

Back to top button