
ಪ್ರಗತಿವಾಹಿನಿ ಸುದ್ದಿ; ಮುಂಬೈ: ಬೆಂಗಾಲಿ ಬೆಡಗಿ , ಬಾಲಿವುಡ್ ನ ಖ್ಯಾತ ನಟಿ ಆರ್ಯಾ ಬ್ಯಾನರ್ಜಿ(35) ಅವರ ಮೃತದೇಹ ಕೋಲ್ಕತ್ತಾದ ಅವರ ನಿವಾಸದಲ್ಲಿ ಪತ್ತೆಯಾಗಿದೆ.
ಆರ್ಯಾ, ದಿ.ಸಿತಾರ್ ವಾದಕ ಪಂಡಿತ್ ನಿಖಿಲ್ ಬ್ಯಾನರ್ಜಿ ಅವರ ಪುತ್ರಿ. 2010ರಲ್ಲಿ ಲವ್ ಸೆಕ್ಸ್ ಔರ್ ದೋಖಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಆರ್ಯಾ 2011ರಲ್ಲಿ ಡರ್ಟಿ ಪಿಕ್ಚರ್ ನಲ್ಲಿ ಅಭಿನಯಿಸಿದ್ದರು.
ಬೆಂಗಾಲಿ ನಟಿಯಾದರೂ ಆರ್ಯಾ ಬ್ಯಾನರ್ಜಿ ಜನಪ್ರಿಯತೆ ಪಡೆದುಕೊಂಡಿದ್ದು ಬಾಲಿವುಡ್ ನಲ್ಲಿ. ಕೋಲ್ಕತ್ತಾದ ದೇವದತ್ತ ಎಂಬ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಆರ್ಯಾ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ನೆಲದ ಮೇಲೆ ಮಲಗಿದ್ದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದ್ದು,ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ