
ಪ್ರಗತಿವಾಹಿನಿ ಸುದ್ದಿ; ಮುಂಬೈ: ಚಲನ ಚಿತ್ರ ನಟ ನಟಿಯರು ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಖ್ಯಾತ ಬಾಲಿವುಡ್ ನಟಿ ತಿಲೋತ್ತಮಾ ಶೋಮೆ ಅವರು ಟ್ರೋಲ್ ಆಗುತ್ತಿರುವ ಕಾರಣ ಮಾತ್ರ ವಿಚಿತ್ರವಾಗಿದೆ.
ಹೌದು. ಚಲನ ಚಿತ್ರ ನಟ, ನಟಿಯರು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಅತೀ ಹೆಚ್ಚು ಫಾಲೋವರ್‌ಗಳನ್ನು ಕೂಡ ಹೊಂದಿರುತ್ತಾರೆ. ತಮ್ಮ ದೈನಂದಿನ ಜೀವನದ ಫೋಟೊಗಳನ್ನು ಹಾಕುವ ಮೂಲಕ ಜನರನ್ನು ಸೆಳೆಯುವ ಯತ್ನದಲ್ಲಿರುತ್ತಾರೆ. ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಗಳಿಸಿಕೊಳ್ಳಲು ಮತ್ತು ತಾವು ಅಭಿನಯಿಸಿದ ಚಿತ್ರಗಳಿಗೆ ಪ್ರೇಕ್ಷಕರನ್ನು ಸೆಳೆಯಲು ಈ ರೀತಿ ಜನರ ಗಮನ ಸೆಳೆಯುತ್ತಿರುವುದು ಒಂದು ಬಗೆಯ ಅನಿವಾರ್ಯತೆಯೇ ಆಗಿದೆ.
ಇದೇ ರೀತಿ ತಿಲೋತ್ತಮಾ ಶೋಮೆ ಕೂಡ ಇನ್ಸ್ಟಾಗ್ರಾಂನಲ್ಲಿ 90 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದು ತಮ್ಮ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ತಿಲೋತ್ತಮಾ ಶೋಮೆ ಟ್ರೋಲ್ ಆಗುತ್ತಿರುವುದರ ಹಿಂದಿನ ಕಾರಣ ಊಹೆಗೂ ನಿಲುಕದ್ದು. ಅವರು ಎಚ್ಚರವಹಿಸದೆ, ಸೂಕ್ಷ್ಮವಾಗಿ ಗ್ರಹಿಸದೆ ಫೋಟೊ ಒಂದನ್ನು ಹಂಚಿಕೊಂಡು ಯಡವಟ್ಟು ಮಾಡಿಕೊಂಡಿದ್ದಾರೆ.
ತಿಲೋತ್ತಮಾ ಶೋಮೆ ಇತ್ತೀಚೆಗೆ ಇನ್ ಸ್ಟಾಗ್ರಾಂನಲ್ಲಿ ತಮ್ಮ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಕಪ್ಪು ಬಣ್ಣದ ಸ್ಲೀವ್‌ಲೆಸ್ ಟಿ ಶರ್ಟ್ ಧರಿಸಿ ತಮ್ಮ ಎರಡೂ ಕೈಗಳನ್ನು ತಲೆಯ ಹಿಂಭಾಗದಲ್ಲಿ ಜೋಡಿಸಿಕೊಂಡಿರುವ ಈ ಚಿತ್ರ ಮೇಲ್ನೋಟಕ್ಕೆ ಸಾಮಾನ್ಯದ್ದು ಎನಿಸಿದರೂ ಫೋಟೊದಲ್ಲಿ ತಿಲೋತ್ತಮಾ ಅವರ ಕಂಕುಳ ಕೂದಲು ಕಾಣುತ್ತಿರುವುದೇ ಈ ಫೋಟೊ ವ್ಯಾಪಕವಾಗಿ ಟ್ರೋಲ್ ಆಗುತ್ತಿರಲು ಕಾರಣವಾಗಿದೆ. ತಿಲೋತ್ತಮಾ ಇಷ್ಟು ಖ್ಯಾತ ನಟಿಯಾದರೂ ಕಂಕುಳ ಕೂದಲು ತೆಗೆದಿಲ್ಲ ಎಂಬುದೆ ಟ್ರೋಲ್‌ಗೆ ಕಾರಣವಾಗುತ್ತಿದೆ. ಈಗಾಗಲೇ ಈ ಫೋಟೊಕ್ಕೆ 6500ಕ್ಕೂ ಹೆಚ್ಚು ಲೈಕ್ಸ್ ಇದ್ದು 150 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಕಮೆಂಟ್ ಮಾಡಿದವರಲ್ಲಿ ಮಹಿಳೆಯರೇ ಹೆಚ್ಚಿರುವುದು ಗಮನಾರ್ಹವಾಗಿದೆ.
ಗೂಬೆಗಳಿಗೂ ಬಂತು ಫ್ರೀ ವೆಡ್ಡಿಂಗ್ ಫೋಟೊ ಶೂಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ