Latest

ಡ್ರಗ್ಸ್ ಗಾಗಿ ಚಾಟ್ ಮಾಡಿದ್ರಾ ಗುಳಿಕೆನ್ನೆಯ ಬೆಡಗಿ…?

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೂ ಡ್ರಗ್ಸ್ ನಂಟಿದೆ ಎಂಬ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ. ದೀಪಿಕಾ ಡ್ರಗ್ಸ್ ಖರೀದಿಗಾಗಿ ವಾಟ್ಸಪ್ ಚಾಟ್ ನಡೆಸಿರುವ ಸ್ಕ್ರೀನ್ ಶಾಟ್ ಗಳು ರಿವೀಲ್ ಆಗಿದ್ದು, ಇದರ ಬೆನ್ನಲ್ಲೇ ಎನ್ ಸಿಬಿ ದೀಪಿಕಾಗೆ ಸಮನ್ಸ್ ನೀಡುವ ಸಾಧ್ಯತೆಯಿದೆ.

ದೀಪಿಕಾ ಪಡುಕೋಣೆಯವರು, ಜಯ್ ಸಾಹಾ ಮತ್ತು ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಜೊತೆಗಿನ ವಾಟ್ಸಪ್ ಸಂಭಾಷಣೆ ನಡೆಸಿರುವುದು ಡ್ರಗ್ಸ್ ಖರೀದಿಗಾಗಿ ಎಂಬ ಸುದ್ದಿಯನ್ನು ಖಾಸಗಿ ಮಾಧ್ಯಮ ವರದಿ ಮಾಡಿದೆ. ದೀಪಿಕಾ, ನಿಮ್ಮ ಬಳಿ ಮಾಲ್ ಇದೆಯಾ ಎಂದು ಕರೀಷ್ಮಾಗೆ ಕೇಳಿದ್ದಾರೆ. ಆಕೆ ಇದೆ ಎಂದಿದ್ದಾರೆ. ಹ್ಯಾಶ್ ಇದೆಯಾ ಎಂದು ದೀಪಿಕಾ ಕೇಳಿದ್ದಾರೆ ಅದಕ್ಕೆ ಹ್ಯಾಶ್ ಅಲ್ಲ ಗಾಂಜಾ. ಬೇಕಿದ್ದರೆ ಅಮಿತ್ ಗೆ ಹೇಳುತ್ತೇನೆ ಎಂಬ ಉತ್ತರ ಕರಿಷ್ಮಾರಿಂದ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಾಟ್ಸಪ್ ಚಾಟ್ ನಲ್ಲಿ ಡಿ ಮತ್ತು ಕೆ ಎಂಬ ಕೋಡ್‍ವರ್ಡ್ ಗಳನ್ನ ಬಳಕೆ ಮಾಡಲಾಗಿದೆ. ಡಿ ಎಂದರೆ ದೀಪಿಕಾ ಪಡುಕೋಣೆ ಮತ್ತು ಕೆ ಎಂದರೆ ಕರೀಷ್ಮಾ ಎಂದು ಹೇಳಲಾಗಿದೆ. ಅಲ್ಲದೇ ಈ ವಾಟ್ಸಪ್ ಚಾಟ್ ನಲ್ಲಿ ಅಮಿತ್ ಮತ್ತು ಶಾಲ್ ಎಂಬ ಹೆಸರುಗಳು ರಿವೀಲ್ ಆಗಿವೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನ ಗುಳಿಕೆನ್ನೆಯ ನಟಿ ದೀಪಿಕಾಗೂ ಡ್ರಗ್ಸ್ ನಶೆಯ ನಂಟಿದೆ ಎನ್ನಲಾಗಿದ್ದು, ಎನ್ ಸಿಬಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button