Latest

ಸುಶಾಂತ್ ಸಿಂಗ್ ಕೇಸ್; ನಟಿ ರಿಯಾ ಚಕ್ರವರ್ತಿ ಬಂಧನ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಹಲವು ತಿರುವು ಪಡೆದುಕೊಂಡಿದ್ದು, ಇದೀಗ ಎನ್ ಸಿಬಿ (ಮಾಧಕವಸ್ತು ನಿಯಂತ್ರಣ ಪ್ರಾಧಿಕಾರ) ಸುಶಾಂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ.

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಡ್ರಗ್ಸ್ ನಂಟಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ತನಿಖೆ ಕೈಗೊಂಡಿದ್ದ ಎನ್ ಸಿಬಿ ಅಧಿಕಾರಿಗಳು ಈಗಾಗಲೇ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಸುಶಾಂತ್ ಆಪ್ತ ಸಹಾಯಕ ಸ್ಯಾಮುಯೆಲ್ ಮಿರಾಂಡಾ ಸೇರಿದಂತ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಡ್ರಗ್ಸ್ ಜಾಲದ ಜತೆ ನಂಟು ವಿಚಾರವಾಗಿ ಬಂಧಿತರ ಮಾಹಿತಿ ಆಧರಸಿ ಹಾಗೂ ರಿಯಾ ಮೊಬೈಲ್ ಮಾಹಿತಿ ಆಧರಿಸಿ ಎರಡು ದಿನಗಳ ಹಿಂದೆ ಎನ್ ಸಿಬಿ ಅಧಿಕಾರಿಗಳು ನಟಿ ರಿಯಾಳನ್ನು ವಶಕ್ಕೆ ಪಡೆದಿದ್ದರು. ಇದೀಗ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ಬಂಧಿಸಿದ್ದಾರೆ.

Home add -Advt

Related Articles

Back to top button