Latest

ಬಾಂಬ್ ಬೆದರಿಕೆ: ಗೋವಾಕ್ಕೆ ಬರುತ್ತಿದ್ದ ವಿಮಾನ ಉಜ್ಬೇಕಿಸ್ತಾನ್ ಗೆ

ಪ್ರಗತಿವಾಹಿನಿ ಸುದ್ದಿ, ಪಣಜಿ:  245 ಜನರೊಂದಿಗೆ ಗೋವಾಕ್ಕೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಉಜ್ಬೇಕಿಸ್ತಾನ್‌ಗೆ ತಿರುಗಿಸಲಾಗಿದೆ.
ರಷ್ಯಾದ ಪೆರ್ಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಜುರ್ ಏರ್ ವಿಮಾನ 2 ಶಿಶುಗಳು ಮತ್ತು 7 ಸಿಬ್ಬಂದಿ ಸೇರಿದಂತೆ ಒಟ್ಟು 245 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಆದರೆ ವಿಮಾನ ನಿಲ್ದಾಣದ ಮೂಲಗಳ ಪ್ರಕಾರ ವಿಮಾನದಲ್ಲಿ ಬಾಂಬ್ ಇರಿಸಿರುವುದಾಗಿ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಯಿತು. 
ಇದರಿಂದಾಗಿ ವಿಮಾನದೊಳಗಿನ ಸಿಬ್ಬಂದಿ ವಿಚಲಿತರಾದರು. ಈ ಸಂದೇಶ ತಲುಪಿದಾಗ ವಿಮಾನ ಇನ್ನೂ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಲಿಲ್ಲ. ಆದರೆ ಸುರಕ್ಷತೆ ದೃಷ್ಟಿಯಿಂದ ವಿಮಾನವನ್ನು ಉಜ್ಬೇಕಿಸ್ತಾನ್ ಗೆ ತಿರುಗಿಸಲಾಯಿತು ಎಂದು ಏರ್ ಪೋರ್ಟ್ ಮೂಲಗಳು ತಿಳಿಸಿವೆ.  
ಈ ವಿಷಯಕ್ಕೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ಅನೇಕ ಜನ ಪ್ರತಿಕ್ರಿಯಿಸಿದ್ದು ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದೆಲ್ಲ ಆರೋಪಿಸಿರುವುದು ಕಂಡುಬಂದಿದೆ.

 

*ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಕರಪತ್ರ ಅಭಿಯಾನ; ಮಾಜಿ ಸಿಎಂ ಸೋಲಿಸಲು ಷಡ್ಯಂತ್ರ*

https://pragati.taskdun.com/kolarasiddaraamaiahkarapatra-abhiyana/

ಭತ್ಯೆ, ಸೌಲಭ್ಯ ಪರಿಷ್ಕರಣೆಗೆ ಶೀಘ್ರ ವರದಿ ಸಲ್ಲಿಸಲು ಒತ್ತಾಯ

https://pragati.taskdun.com/demand-to-submit-early-report-for-revision-of-allowance-facility/

ಶನಿವಾರ ಮಹಾರಾಷ್ಟ್ರದ ಪುಣೆಯ ಭೋಸರಿಯಲ್ಲಿ ಅತ್ಯಾಧುನಿಕ ’ಕೆಎಲ್‌ಇ ಮೆಡಿಕವರ್ ಆಸ್ಪತ್ರೆ’ ಉದ್ಘಾಟನೆ

https://pragati.taskdun.com/kle-medicover-hospital-inaugurated-at-bhosari-pune-maharashtra-on-saturday/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button