National

*ಇಂದು ಒಂದೆ ದಿನ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಇಂಡಿಗೋದ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 20ಕ್ಕೂ ಹೆಚ್ಚು ವಿಮಾನಗಳಿಗೆ ಭಾನುವಾರ ಮತ್ತೆ ಬಾಂಬ್ ಬೆದರಿಕೆಗಳು ಬಂದಿದೆ.

ಇಂಡಿಗೋ 6 ವಿಮಾನ, ವಿಸ್ತಾರಾ ಮತ್ತು ಏರ್ ಇಂಡಿಯಾಗೆ ಬೆದರಿಕೆ ಕರೆಗಳು ಬಂದಿವೆ. ವರದಿಗಳ ಪ್ರಕಾರ, ಜೆಡ್ಡಾದಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ, ಕೋಝಿಕೋಡ್‌ನಿಂದ ದಮ್ಮಾಮ್ ವಿಮಾನ, ದೆಹಲಿಯಿಂದ ಇಸ್ತಾಂಬುಲ್ ವಿಮಾನ, ಮುಂಬೈನಿಂದ ಇಸ್ತಾನ್ಸುಲ್ ವಿಮಾನ, ಪುಣೆಯಿಂದ ಜೋಧಪುರ ಹಾಗೂ ಗೋವಾದಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ವಿಮಾನಕ್ಕೆ ಬೆದರಿಕೆ ಕರೆ ಬಂದಿವೆ.

ಈ ಬಗ್ಗೆ ವಿಸ್ತಾರಾ ವಕ್ತರರು ಮಾತನಾಡಿ, ಈಗಾಗಲೇ ಎಲ್ಲಾ ರೀತಿಯ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ. ಘಟನೆಗೆ ಸಂಬಂಧಿಸಿ ಅಧಿಕಾರಿಗಳಿಗೆ ತಕ್ಷಣವೇ ತಿಳಿಸಲಾಗಿದೆ. ಭದ್ರತಾ ಕಾರ್ಯವಿಧಾನಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಕೆಲವು ವಿಮಾನಗಳನ್ನು ಭದ್ರತಾ ಎಚ್ಚರಿಕೆಗಳಿಗೆ ಒಳಪಡಿಸಲಾಗಿದೆ ಎಂದು ಆಕಾಶ ಏರ್ ವಕ್ತಾರರು ಖಚಿತಪಡಿಸಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಮೇಲ್ ಮೂಲಕ ವಿಮಾನ ನಿಲ್ದಾಣ ಸ್ಪೋಟಿಸುವದಾಗಿ ಬೆದರಿಕೆ ಹಾಕಿರುವ ಹಿನ್ನೆಲೆ ಪರಿಶಿಲನೆ ನಡೆಸಿರುವ ಪೊಲೀಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕುರಿತು ಸುಳ್ಳು ಇಮೇಲ್‌ ಬಂದಿದೆ ಎಂದು ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. 

Home add -Advt

ಇಡೀ ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ತಪಾಸಣೆ ಮಾಡಲಾಗಿದೆ, ಏನೂ ಸಿಕ್ಕಿಲ್ಲ. ಸುಳ್ಳು ಇಮೇಲ್ ಕಳುಹಿಸುವವರ ಪತ್ತೆಗೆ ತನಿಖೆ ಮಾಡುತ್ತಿದ್ದೇವೆ ಎಂದು ಡಿಸಿಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ. 

Related Articles

Back to top button