
ಪ್ರಗತಿ ವಾಹಿನಿ ಸುದ್ದಿ ಭೋಪಾಲ್ – ಪುಲ್ವಾಮಾ ದಾಳಿಯ ಕರಾಳ ನೆನಪನ್ನು ಭಾರತೀಯರು ಮರೆಯಲು ಸಾಧ್ಯವಿಲ್ಲ. ಬಾಂಬ್ ಸ್ಪೋಟದಿಂದ ೪೦ ಸಿಆರ್‌ಪಿಎಫ್ ಜವಾನರು ಹುತಾತ್ಮರಾಗಿದ್ದಲ್ಲದೇ ಅವರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿದ್ದ ಚಿತ್ರಗಳನ್ನು ನೋಡಿದ ಪ್ರತಿ ಭಾರತೀಯನಿಗೆ ದುಖಃ ಉಮ್ಮಳಿಸಿ ಬರುತ್ತದೆ.
ಆದರೆ ಈ ಪುಲ್ವಾಮಾ ದಾಳಿಯನ್ನು ಸಮರ್ಥಿಸಿಕೊಂಡು ಯುವಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನೀಚ ಕೃತ್ಯ ಮಧ್ಯಪ್ರದೇಶದ ನೀಮುಛ್ ನಲ್ಲಿ ನಡೆದಿದೆ. ನೀಮುಛ್‌ನ ಸರಕಾರಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿರುವ ಕಾಶ್ಮೀರ ಮೂಲದ ಯುವಕ ಇಂಥಹ ಹೇಯ ಕೃತ್ಯ ಎಸಗಿದ್ದಾನೆ.
ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಪ್ರತಿಕಾರವಂತೆ
ಯುವಕನ ದೇಶದ್ರೋಹಿ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ನೀಮುಛ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆತನ ಹೆಸರು ಬಹಿರಂಗಪಡಿಸಿಲ್ಲ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಸೂರಜ್‌ಕುಮಾರ್, ಯುವಕನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಸ್ಕಾಲರ್ ಶಿಪ್ ಪಡೆಯುತ್ತಿದ್ದ
ಯುವಕ ಕೇಂದ್ರ ಸರಕಾರದಿಂದ ಸ್ಕಾಲರ್ ಶಿಪ್ ಪಡೆದು ಓದುತ್ತಿದ್ದ, ದೇಶದ ಅನ್ನ ತಿನ್ನುವುದಲ್ಲದೇ ಓದಲು ಸಕಲ ಸೌಲಭ್ಯವನ್ನೂ ಪಡೆದು ದೇಶದ ಸೈನಿಕ ಸಾವನ್ನು ಸಂಭ್ರಮಿಸಿದ ಬಗ್ಗೆ ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಟಿ ದಿಗ್ಗಜ ನಂದನ್ ನೀಲೇಕಣಿ ಮೊಬೈಲ್‌ನಲ್ಲಿ ಸೋಷಿಯಲ್ ಮೀಡಿಯಾ ಆಪ್‌ಗಳೇ ಇಲ್ಲ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ