ಬೆಳಗಾವಿಯಲ್ಲಿ ಮರಾಠಿಯ ಬಾಯ್ಸ್ -3 ಸಿನೇಮಾ ಪ್ರದರ್ಶನಕ್ಕೆ ಬಿತ್ತು ಬ್ರೇಕ್ : ಯಶಸ್ವಿಯಾದ ಕರವೇ ಹೋರಾಟ
ಪ್ರಗತಿ ವಾಹಿನಿ, ಬೆಳಗಾವಿ : ವಿವಾದಾತ್ಮಕ ಮರಾಠಿ ಚಲನ ಚಿತ್ರ ಬಾಯ್ಸ್ ಪಾರ್ಟ್ 3 ಚಲನ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಮಹಾರಾಷ್ಟ್ರದ ಹಲವೆಡೆ ಶುಕ್ರವಾರ ಈ ಚಿತ್ರ ತೆರೆ ಕಂಡರೂ ಬೆಳಗಾವಿಯಲ್ಲಿ ಚಿತ್ರ ಪ್ರದರ್ಶನ ಕಂಡಿಲ್ಲ.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾಜ್ಯೋತ್ಸವಕ್ಕೆ ಕನ್ನಡಿಗರು ಸಂಭ್ರಮದಿಂದ ಸಿದ್ಧಗೊಳ್ಳುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂ.ಇ.ಎಫ್. ಏನಾದರೊಂದು ಕಿತಾಪತಿ ಮಾಡಿ ಕನ್ನಡ ಮರಾಠಿ ಭಾಷಾ ಬಾಂಧವ್ಯಕ್ಕೆ ಹುಳಿ ಹಿಂಡುವ ಕೆಲಸ ಮಾಡಿ ಕಾನೂನು ಸುವ್ಯವಸ್ಥೆ ಭಂಗ ಮಾಡಲು ಸದಾ ಪ್ರಯತ್ನಿಸುತ್ತಾರೆ.
ಇನ್ನು ಒಂದೂವರೆ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದು, ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತ್ಯಂತ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಹುಮ್ಮಸ್ಸಿನಲ್ಲಿರುವ ಕನ್ನಡಿಗರಿಗೆ ಪ್ರಚೋದಿಸುವಂತೆ ಮಾಡಲು ವಿವಾದಾತ್ಮಕ ಮರಾಠಿ ಚಲನ ಚಿತ್ರ ಬಾಯ್-3 ಬೆಳಗಾವಿಯಲ್ಲೂ ಬಿಡುಗಡೆಗೆ ಸಿದ್ಧವಾಗಿತ್ತು.
ಈ ಚಿತ್ರ ಕರ್ನಾಟಕ-ಮಹಾರಾಷ್ಟ್ರ ಗಡಿ ವಿಷಯವನ್ನಿಟ್ಟು ತಯಾರಾಗಿರುವ ಚಲನ ಚಿತ್ರವಾಗಿದೆ. ಚಿತ್ರದ ಒಂದು ದೃಶ್ಯದಲ್ಲಿ ಕರ್ನಾಟಕದ ಪೊಲೀಸ್ ಠಾಣೆಗೆ ಬಂದು, ಬಂದು ನಮ್ಮ ಪೊಲೀಸರಿಗೆ, ನಿಮಗೆ ನಿಮ್ಮ ಕನ್ನಡ ಭಾಷೆಯ ಮೇಲೆ ಅಭಿಮಾನವಿದ್ದರೆ ನಮಗೂ ನಮ್ಮ ಮರಾಠಿ ಭಾಷೆಯ ಮೇಲೆ ದುಪ್ಪಟ್ಟು ಅಭಿಮಾನವಿದೆ, ಅಷ್ಟಕ್ಕೂ ಮರಾಠಿ ಭಾಷೆಯನ್ನು ಬೆಳಗಾವಿಯಲ್ಲಿ ಮಾತನಾಡದಿದ್ದರೆ ಮತ್ತೆಲ್ಲಿ ಮಾತನಾಡಬೇಕು ಎಂದು ಹೇಳುವ ದೃಷ್ಯವಿದೆ.
ಆದ್ದರಿಂದ ಈ ಚಲನಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾದರೆ ಕನ್ನಡ, ಮರಾಠಿ ಭಾಷಾ ಭಾಂದವ್ಯ ಹದಗೆಟ್ಟು ಕಾನೂನು ಸುವ್ಯವಸ್ಥೆ ಹಾಳಾಗುವ ಸಂಭವವಿದೆ, ಕಾರಣ ಸೆಪ್ಟೆಂಬರ್ 16 ರಂದು ತೆರೆ ಕಾಣುವ ಈ ಚಲನ ಚಿತ್ರ ಬೆಳಗಾವಿ ಸೇರಿದಂತೆ ಕರ್ನಾಟಕದ ಯಾವ ಭಾಗದಲ್ಲೂ ಬಿಡುಗಡೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಗಿತ್ತು.
https://pragati.taskdun.com/latest/karave-objectionsrelease-boys-3marathi-filmin-karnataka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ