Latest

*ಸ್ನೇಹಿತರೊಂದಿಗೆ ಸೇರಿ ಮನೆಯಲ್ಲಿದ್ದ ಚಿನ್ನಾಭರಣವನ್ನೇ ಕದ್ದ ಬಾಲಕ*

ಪ್ರಗತಿವಾಹಿನಿ ಸುದ್ದಿ: ಮನೆಯ ಮಗನೇ ಸ್ನೇಹಿತರ ಜೊತೆ ಸೇರಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ಕದ್ದ ಘಟನೆ ದಕ್ಷಿನ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

ಶೋಕಿ ಜೀವನಕ್ಕಾಗಿ ಅಪ್ರಾಪ್ತ ಬಾಲಕನೊಬ್ಬ ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ಕದ್ದಿದ್ದಾನೆ. ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿ ಐವರನ್ನು ವಶಕ್ಕೆ ಪಡೆದ ಪೊಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಳ್ಳಾಲ ಬೈಲಿನ ವ್ಯಕ್ತಿಯೊಬ್ಬರು ಮನೆಯಲ್ಲಿದ್ದ ಚಿನ್ನಾಭರಣ ಕಳುವಾಗಿದೆ ಎಂದು ದೂರು ನೀಡಿದ್ದರು. ಮನೆಯ ಬೆಡ್ ರೂಮ್ ನಲ್ಲಿ ಕಪಾಟಿನಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಡಲಾಗಿದ್ದ ಚಿನ್ನದ ಕರಿಮಣಿ ಸರ, ಬ್ರಾಸ್ ಲೈಟ್, ಉಂಗುರಗಳು, ಕಿವಿ ಓಲೆ, ಕೈಬಳೆ ಸೇರಿದಂತೆ 15 ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನಾಭರಣ ಕಾಣಿಸುತ್ತಿಲ್ಲ ಎಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Home add -Advt

ತನಿಖೆ ನಡೆಸಿದ ಪೊಲೀಸರಿಗೆ ಪಿಯುಸಿ ಓದುತ್ತಿದ್ದ ಮನೆ ಮಗನೇ ಕಳ್ಳತನದ ರೂವಾರಿ ಎಂದು ಗೊತ್ತಾಗಿದೆ. ನೆರೆ ಮನೆಯ ಮತ್ತೋರ್ವ ಅಪ್ರಾಪ್ತ ಬಾಲಕನ ಜೊತೆ ಸೇರಿ ಸ್ನೇಹತರೊಂದಿಗೆ ಕಳ್ಳತನ ಮಾಡಿದ್ದು, ಐವರನ್ನು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತ ಬಾಲಕರಿಬ್ಬರಿಗೂ ಜಾಮೀನು ಸಿಕ್ಕಿದೆ ಎಂದು ತಿಳಿದುಬಂದಿದೆ.

Related Articles

Back to top button