ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎನ್ನುವ ವಿಷಯವನ್ನು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಹಿರಂಗಪಡಿಸಿದ್ದಾರೆ.
ಗೋಕಾಕದಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊನ್ನೆ ಕರೆದು ಈಬಾರಿ ರಮೇಶ ಜಾರಕಿಹೊಳಿ, ಯೋಗೀಶ್ವ ಮತ್ತು ನಿಮ್ಮನ್ನು ಮಂತ್ರಿ ಮಾಡಬೇಕೆಂದಿದ್ದೇನೆ ಎಂದರು. ನನಗೆ ಮಂತ್ರಿ ಬೇಡ. ನಾನು ಕೇಳುತ್ತಿರುವ ಮೀಸಲಾತಿ ಕೊಡಿ ಎಂದಿದ್ದೇನೆ. ಇನ್ನು 6 ತಿಂಗಳಲ್ಲಿ ನಾನು ಮಂತ್ರಿಯಾಗಿ ಏನು ಮಾಡಬೇಕು? ಸನ್ಮಾನ ಮಾಡಿಕೊಳ್ಳುವುದರೊಳಗೆ ಚುನಾವಣೆ ಬಂದೇ ಬಿಡ್ತದೆ ಎಂದು ಅವರು ಹೇಳಿದರು.
ಸ್ಟಾರ್ ಕ್ಯಾಂಪೇನರ್ ಆಗಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಮನೆಗೆ ಬಂದು ಈಗಾಗಲೆ ಆಮಂತ್ರಣ ಕೊಟ್ಟಿದ್ದಾರೆ. ನನ್ನ ಮನೆ ಬಾಗಿಲಿಗೆ ಹೈಕಮಾಂಡ್ ನವರು ಬರುವ ಮೂಲಕ ಅವರು ದೊಡ್ಡವರಾದರು. ನಾನು ಸಣ್ಣವನಾದೆ ಎಂದು ಅವರು ಹೇಳಿದರು.
ನನ್ನನ್ನು ಮುಗಿಸಲು ಎಲ್ಲ ಕಳ್ಳರೂ ಒಂದಾದರು. ಹಣ ಹಂಚಿದರು. ನನ್ನನ್ನು ಅಲ್ಲಾಡಿಸಲು ಯಾರಿಂದಲೂ ಆಗುವುದಿಲ್ಲ. ದುಬೈನಲ್ಲಿ ಆಸ್ತಿ ಮಾಡಿ ಏನು ಮಾಡುತ್ತೀರಿ? ರೈತರಿಗೆ ಸರಿಯಾಗಿ ದುಡ್ಡು ಕೊಡಿ, ಕಾಟಾ ಹೊಡೆಯೋದು ಬಿಡಿ. ದುಡ್ಡು ಹೊಡೆದು ಏನು ಮಾಡುತ್ತೀರಿ. ಗೋಶಾಲೆ ಕಟ್ಟಿ, ಆಸ್ಪತ್ರೆ ಕಟ್ಟಿ ಎಂದು ಮಾರ್ಮಿಕವಾಗಿ ನುಡಿದರು.
ಸ್ವಾಭಿಮಾನದಿಂದ ಬದುಕೋಣ. ಯಾರಮನೆ ಮುಂದೆ ಹೋಗಿ ಯಾಕೆ ಕೈ ಮುಗೀತೀರಿ? ಎಂದು ಪ್ರಶ್ನಿಸಿದರು.
ಈ ಬಾರಿ ಮೀಸಲಾತಿ ಸಿಕ್ಕೇ ಸಿಗುತ್ತದೆ. ಎಲ್ಲರೂ ಹೋರಾಟಕ್ಕೆ ಬನ್ನಿ ಎಂದು ಆಹ್ವಾನಿಸಿದರು.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ -.
ಮೊದಲ ಬಾರಿಗೆ ಗೋಕಾಕ ನೆಲದಲ್ಲಿ ಗುಡುಗಿದ ಕಡಾಡಿ; ಈ ಬಾರಿ ವಿಧಾನಸೌಧ ಕಬ್ಜಾ ಎಂದ ಕಾಶಪ್ಪನವರ್
https://pragati.taskdun.com/politics/panchamasali-samavesha-gokak/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ