ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅವ್ಯಾಹತ ಮಳೆಗೆ ಜಿಲ್ಲೆಯ ನದಿಗಳು ಮಟ್ಟ ಮೀರಿ ಹರಿಯತೊಡಗಿದ್ದು ಹಲವು ಸೇತುವೆಗಳು ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ.
ಸದಲಗಾ ಬಳಿಯ ಮಲಿಕವಾಡ- ದಾನವಾಡ ಸೇತುವೆ ಹಾಗೂ ಭೋಜ- ಕಾರದಗಾ ಸೇತುವೆಗಳು ದೂಧಗಂಗಾ ಪ್ರವಾಹದಲ್ಲಿ ಮುಳುಗಡೆಯಾಗಿವೆ.
ಕೃಷ್ಣಾ ನದಿಯೂ ಮಟ್ಟ ಮೀರಿ ಹರಿಯುತ್ತಿದ್ದು ಕಲ್ಲೋಳ- ಯಡೂರ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ಹಲವು ಗ್ರಾಮಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.
ಸೇತುವೆಗಳು ಮುಳುಗಡೆಯಾದ ಪ್ರದೇಶಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಾರ್ವಜನಿಕರು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಎರಡು ಬೈಕ್ ಗಳ ಡಿಕ್ಕಿ; ಒಬ್ಬ ಸಾವು, ಇನ್ನೊಬ್ಬನಿಗೆ ಗಂಭೀರ ಗಾಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ