Kannada NewsKarnataka NewsLatest

ಬೆಳಗಾವಿಗೂ ಬ್ರಿಟನ್ ಸೋಂಕಿನ ಆತಂಕ: ಲಂಡನ್ ನಿಂದ ಬೆಳಗಾವಿಗೆ ಬಂದ ಮಹಿಳೆ ಟೆಸ್ಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೋನಾ ವೈರಸ್ ಬೆಳಗಾವಿಯಲ್ಲೂ ಆತಂಕ ಸೃಷ್ಟಿಸಿದೆ.

ನಿನ್ನೆ ಲಂಡನ್ ನಿಂದ 35 ವರ್ಷದ ಮಹಿಳೆಯೋರ್ವಳು ಬೆಳಗಾವಿಗೆ ಆಗಮಿಸಿದ್ದು, ಆಕೆಯನ್ನು ಕೊರೋನಾ ಟೆಸ್ಟ್ ಗೆ ಒಳಪಡಿಸಲಾಗಿದೆ.

Home add -Advt

ಲಂಡನ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಹಿಳೆ ಅಲ್ಲಿಂದ ವಿಮಾನದ ಮೂಲಕವೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ. ನಂತರ ಖಡೇಬಜಾರದಲ್ಲಿರುವ ತನ್ನ ಮನೆಗೆ ತೆರಳಿದ್ದಾಳೆ.

ಮಾಹಿತಿ ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಹಿಳೆಯ ಮನೆಗೆ ತೆರಳಿ ಪರೀಕ್ಷೆ ನಡೆಸಿದ್ದಾರೆ. ಜೊತೆಗೆ ಆಕೆ ಮತ್ತು ಆಕೆಯ ಸಂಪರ್ಕಕ್ಕೆ ಬಂದವರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ.

ಇಂದು ಸಂಜೆಯ ಹೊತ್ತಿಗೆ ಮಹಿಳೆಯ ಕೊರೋನಾ ಟೆಸ್ಟ್ ರಿಪೋರ್ಟ್ ಬರುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರೂಪಾಂತರ ವೈರಸ್ ಆತಂಕ ಮನೆಮಾಡಿದೆ.

 ಹೊಸ ವೈರಾಣು: ರಾಜ್ಯದಲ್ಲಿ ಹಲವು ಕ್ರಮ

Related Articles

Back to top button