
ಪ್ರಗತಿವಾಹಿನಿ ಸುದ್ದಿ: ವರುಣ ನಾಲೆ ನೀರಿನಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಲು ಹೋಗಿದ್ದ ಇಬ್ಬರು ಸಹೋದರರು ನೀರುಪಾಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಬಡಗಲಹುಂಡಿಯಲ್ಲಿ ಈ ದುರಂತ ಸಂಭವಿಸಿದೆ. ನಂದನ್ ಹಾಗೂ ರಾಕೇಶ್ ಮೃತ ಸಹೋದರರು. ನಾಲೆ ನೀರಿನಲ್ಲಿ ಸಿಲುಕಿಕೊಂಡಿದ್ದ ಬಾಲಕ ಮರದ ಕೊಂಬೆ ಹಿಡಿದುಕೊಂಡು ರಕ್ಷಣೆಗಾಗಿ ಮೊರೆ ಇಡುತ್ತಿದ್ದ. ಬಾಲಕನ್ನು ರಕ್ಷಿಸಲು ನಂದನ್ ಹಾಗೂ ರಾಕೇಶ್ ಇಬ್ಬರೂ ನಾಲೆ ನೀರಿಗೆ ಇಳಿದಿದ್ದಾರೆ. ಈ ವೇಳೆ ಇಬ್ಬರೂ ನಾಲೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದಾರೆ.
ಮೃತ ನಂದನ್ 15 ದಿನಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾಗಿದ್ದ. ಈಗ ಪತಿಯನ್ನೇ ಕಳೆದುಕೊಂಡಿರುವ ನವವಧುವಿನ ಬಾಳಲ್ಲಿ ಕತ್ತಲು ಆವರಿಸಿದೆ.


