Kannada NewsKarnataka NewsLatest

ಕರಗಾಂವ ಏತ ನೀರಾವರಿ ಯೋಜ‌ನೆಗೆ ಬಜೆಟ್ ನಲ್ಲಿ ಮಂಜೂರಾತಿ: ದುರ್ಯೋಧನ ಐಹೊಳೆ ಹರ್ಷ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ
ಕರಗಾಂವ ಏತ ನೀರಾವರಿ ಯೋಜ‌ನೆಗೆ ಪ್ರಸಕ್ತ ಬಜೆಟ್ ನಲ್ಲಿ ರಾಜ್ಯ ಸರಕಾರ ೪೦೦ ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿದೆ ಎಂದು ರಾಯಬಾಗ ಶಾಸಕ  ದುರ್ಯೋಧನ ಐಹೊಳೆ ತಿಳಿಸಿದರು.
ತಾಲೂಕಿನ ಕಬ್ಬೂರ, ಕೆಂಚನಟ್ಟಿ, ಬೆಳಗಲಿ, ಕಮತೆನಟ್ಟಿ, ಬೆಳಕೂಡ ಗ್ರಾಮಗಳಲ್ಲಿ ೩.೩೫ ಕೋಟಿ ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಬಜೆಟ್ ನಲ್ಲಿ ಒಟ್ಟಾರೆಯಾಗಿ ೫೦೦೦ ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಅನುದಾನದಡಿ ಒಟ್ಟಾರೆಯಾಗಿ ೪೦೦ ಕೋಟಿ ಕ್ರಿಯಾ ಯೋಜನೆಗೆ ಬಜೆಟ್ ಪೂರ್ವ ದಿನ ನಡೆದ ನೀರಾವರಿ ಇಲಾಖೆ ಸಭೆಯಲ್ಲಿ ಈ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಅನುಮೋದನೆ ನೀಡಿ ಮಂಜೂರಾತಿ ನೀಡಿದ್ದು ಅವರನ್ನು ಕ್ಷೇತ್ರದ ಜನತೆ ಪರವಾಗಿ ಅಭಿನಂದಿಸುತ್ತೇನೆ ಎಂದರು.
ನಾಗರಮುನ್ನೋಳಿ ಜಿಲ್ಲಾ ಪಂಚಾಯತ ಸದಸ್ಯ ಪವನ ರಮೇಶ ಕತ್ತಿ ಮಾತನಾಡಿ, ಕರಗಾಂವ ಏತ ನೀರಾವರಿ ಈಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಶಾಸಕರ ಪ್ರಯತ್ನದಿಂದ ಈ ಯೋಜನೆಗೆ ಮಂಜೂರಾತಿ ದೊರೆತಿದ್ದು, ಬರುವ ನಾಲ್ಕಾರು ತಿಂಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಹಿರಾಶುಗರ ನಿರ್ದೇಶಕ ಸುರೇಶ ಬೆಲ್ಲದ, ಎ.ಎಸ್. ಖೆಮಲಾಪುರೆ, ಬಸಲಿಂಗ ಕಾಡೇಶಗೋಳ, ಮಹೇಶ ಭಾತೆ, ಸಿದ್ದಪ್ಪ ಮರ್ಯಾಯಿ, ವಿಜಯ ಕೋಠಿವಾಲೆ, ದುಂಡಪ್ಪ ಬೆಂಡವಾಡೆ, ಗುಲಾಬ ಜಮಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button